ಬಂಗಾಳದಲ್ಲಿ ಸುವೇಂದು ಅಧಿಕಾರ! ವಾಷಿಂಗ್​ ಮಶಿನ್​ ಎಂದು ವ್ಯಂಗ್ಯವಾಡಿದ ಪ್ರಕಾಶ್​ ರಾಜ್​! Prakash Raj on Suvendu Adhikari

ವಾಷಿಂಗ್​ ಮಶಿನ್​ ಎಂದು ವ್ಯಂಗ್ಯವಾಡಿದ ಪ್ರಕಾಶ್​ ರಾಜ್​
ವಾಷಿಂಗ್​ ಮಶಿನ್​ ಎಂದು ವ್ಯಂಗ್ಯವಾಡಿದ ಪ್ರಕಾಶ್​ ರಾಜ್​
Published on

ಪ್ರಮುಖ ಮುಖ್ಯಾಂಶಗಳು

  • ಪಶ್ಚಿಮ ಬಂಗಾಳದ ನೂತನ ಸಿಎಂ ಆಗಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕಾರ
  • ವಾಷಿಂಗ್​ ಮಶಿನ್​ ಎಂದು ವ್ಯಂಗ್ಯವಾಡಿದ ಪ್ರಕಾಶ್​ ರಾಜ್​
  • ಹತ್ತು ವರ್ಷ ಹಳೆಯ ವಿಡಿಯೋ ಹಂಚಿಕೊಂಡ ನಟ
ವೈರಲ್​: ಇತ್ತೀಚೆಗೆ ನಡೆದಿದ್ದ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ ಬಹುಮತ ಪಡೆದು ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನವನ್ನು ಸ್ವೀಕರಿಸಿದ್ದಾರೆ. ಸುವೇಂದು ಅಧಿಕಾರಿ ಸಿಎಂ ಆಗಿದ್ದಕ್ಕೆ ವಿರೋಧ ವ್ಯಕ್ತ ಪಡಿಸಿರುವ ಬಹುಭಾಷಾ ನಟ ಪ್ರಕಾಶ್​ ರಾಜ್ (Prakash Raj on Suvendu Adhikari)​, ವಾಷಿಂಗ್​ ಮಶಿನ್​ ಎಂದು ಟ್ವಿಟ್​ ಮಾಡಿದ್ದಾರೆ.

10 ವರ್ಷ ಹಳೆಯ ವಿಡಿಯೋ ಹಂಚಿಕೊಂಡ ನಟ!

ಬಿಜೆಪಿ ಸೇರವ ಮೊದಲು ಟಿಎಂಸಿ ಪಕ್ಷದಲ್ಲಿದ್ದ ಸುವೇಂದು ಅಧಿಕಾರಿ ಹತ್ತು ವರ್ಷಗಳ ಹಿಂದೆ ನರದಾ ಸ್ಟ್ರಿಂಗ್​ ಆಪರೇಷನ್​ನಲ್ಲಿ ಲಂಚ ಸ್ವೀಕರಿಸುತ್ತಾ ಸಿಕ್ಕಿಬಿದ್ದ ವಿಡಿಯೋವನ್ನು, ಮತ್ತು ಆ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಪ್ರತಿಕ್ರಿಯೆಯನ್ನು ಪ್ರಕಾಶ್ ರಾಜ್​ ಹಂಚಿಕೊಂಡಿದ್ದಾರೆ.
ಇನ್ನೊಂದು ಟ್ವಿಟ್​ನಲ್ಲಿ ಮೋದಿಗೆ ಟಾಂಗ್​!
ಹೀಗೆ, ಮತ್ತೊಂದು ಫೋಸ್ಟ್ ಹಂಚಿಕೊಂಡಿರುವ ಪ್ರಕಾಶ್​ ರಾಜ್​, ಅದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಸಾಲು-ಸಾಲು ಕಟ್​ಔಟ್​ಗಳ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಅಬ್ಬಬ್ಬಾ ಏನು ಜನ.. ಎಂದು ವ್ಯಂಗ್ಯವಾಡಿದ್ದಾರೆ.
ಚುನಾವಣಾ ಫಲಿತಾಂಶ: ಬಿಜೆಪಿಯ ಅಭೂತಪೂರ್ವ ಜಯ
294 ಸದಸ್ಯ ಬಲದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಸಾಧಿಸಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಕೇವಲ 80 ಸ್ಥಾನಗಳಿಗೆ ಸೀಮಿತವಾಗುವ ಮೂಲಕ ಹೀನಾಯ ಸೋಲು ಅನುಭವಿಸಿದೆ. ಸುವೇಂದು ಅಧಿಕಾರಿ ಅವರು ಭವಾನಿಪುರ ಕ್ಷೇತ್ರದಲ್ಲಿ ಮಮತಾ ಬ್ಯಾನರ್ಜಿ ವಿರುದ್ಧ 15,115 ಮತಗಳ ಅಂತರದಿಂದ ಗೆಲುವು ಸಾಧಿಸಿ, 'ಜೈಂಟ್ ಕಿಲ್ಲರ್' ಪಟ್ಟವನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ,(ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net