ಕೋಲ್ಕತ್ತಾ: ಬಂಗಾಳದ ರಾಜಕೀಯ ಇತಿಹಾಸದಲ್ಲೇ ಹಿಂದೆಂದೂ ಕಾಣದಂತಹ ಮಹತ್ವದ ತಿರುವು ಈಗ ಸೃಷ್ಟಿಯಾಗಿದೆ. ದಕ್ಷಿಣ ಬಂಗಾಳದ ಬಲಿಷ್ಠ ನಾಯಕ, ಬಿಜೆಪಿಯ ಮುಂಚೂಣಿ ಕಲಿ ಸುವೇಂದು ಅಧಿಕಾರಿ(SuvenduAdhikari) ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಭದ್ರಕೋಟೆ ಭವಾನಿಪುರದಲ್ಲಿ ಮಮತಾ ಅವರನ್ನೇ ಮಣಿಸಿ ಇತಿಹಾಸ ಬರೆದಿದ್ದಾರೆ. ಇದರ ಬೆನ್ನಲ್ಲೇ ತಮ್ಮ ಆಕ್ರಮಣಕಾರಿ ಶೈಲಿಯನ್ನು ಮುಂದುವರಿಸಿರುವ ಅಧಿಕಾರಿ, ಟಿಎಂಸಿಯ ಪ್ರತಿಯೊಬ್ಬ ಗೂಂಡಾಗಳೂ ತಮ್ಮ ದೌರ್ಜನ್ಯಕ್ಕೆ ಬಿಜೆಪಿ ಸರ್ಕಾರದಲ್ಲಿ ಲೆಕ್ಕ ಒಪ್ಪಿಸಬೇಕಾಗುತ್ತದೆ ಎಂದು ಗುಡುಗಿದ್ದಾರೆ.