ಕಾರಿಗೆ 6,000 ರೂ. ಪೆಟ್ರೋಲ್ ಹಾಕಿಸಿ ಚಾಲಕ ಮಾಡಿದ ಆ ಒಂದು ಕೆಲಸ... ವಿಡಿಯೋ ನೋಡಿ ನೆಟ್ಟಿಗರು 'ಥೂ' ಅಂದಿದ್ದೇಕೆ? Petrol Pump Scam

Petrol Pump Scam (ಚಿತ್ರ X)
Petrol Pump Scam (ಚಿತ್ರ X)
Published on
ಹರಿಯಾಣ: ಪೆಟ್ರೋಲ್ ಪಂಪ್ ಸಿಬ್ಬಂದಿಯ ಕಣ್ಣಿಗೆ ಮಣ್ಣೆರಚಿ, 6 ಸಾವಿರ ರೂಪಾಯಿ ಮೌಲ್ಯದ ಇಂಧನ ತುಂಬಿಸಿಕೊಂಡು ಹಣ ನೀಡದೆ ಸ್ಕಾರ್ಪಿಯೋ (Petrol Pump Scam)  ಕಾರಿನ ಚಾಲಕನೊಬ್ಬ ಪರಾರಿಯಾಗಿರುವ ಆಘಾತಕಾರಿ ಘಟನೆ ಗುರುಗ್ರಾಮದ ಪೆಟ್ರೋಲ್ ಬಂಕ್‌ವೊಂದರಲ್ಲಿ ನಡೆದಿದೆ.

ಘಟನೆಯ ವಿವರ

ಗುರುಗ್ರಾಮದ ಪಟೌಡಿ-ಬಿಲ್ವಾಸ್ಪುರ್​ ಮುಖ್ಯ ರಸ್ತೆಯಲ್ಲಿರುವ ಪೆಟ್ರೋಲ್ ಪಂಪ್‌ಗೆ ಸ್ಕಾರ್ಪಿಯೋ ಕಾರೊಂದು ಬಂದು ನಿಂತಿದೆ. ಈ ವೇಳೆ ಅದರ ಚಾಲಕ ಸಿಬ್ಬಂದಿಗೆ ಆರು ಸಾವಿರದ ಪೆಟ್ರೋಲ್​ ಹಾಕುವಂತೆ ಸೂಚಿಸಿದ್ದಾರೆ. ಚಾಲಕನ ಮಾತನ್ನು ನಂಬಿದ ಬಂಕ್ ಸಿಬ್ಬಂದಿ ಇಂಧನವನ್ನು ಕಾರಿಗೆ ತುಂಬಿಸಿದ್ದಾರೆ.
ಇಂಧನ ತುಂಬಿಸುವುದು ಪೂರ್ಣಗೊಳ್ಳುತ್ತಿದ್ದಂತೆ, ಸಿಬ್ಬಂದಿ ಹಣ ಪಾವತಿಸುವಂತೆ ಚಾಲಕನಿಗೆ ಕೇಳಿದ್ದಾರೆ. ಈ ವೇಳೆ ಚಾಲಕ ಆನ್‌ಲೈನ್ ಮೂಲಕ ಹಣ ಪಾವತಿಸುವುದಾಗಿ ನಂಬಿಸಿ ತನ್ನ ಮೊಬೈಲ್ ಫೋನ್ ಕೈಗೆತ್ತಿಕೊಂಡಿದ್ದಾನೆ. ಸಿಬ್ಬಂದಿ ಕ್ಯೂಆರ್ ಕೋಡ್ ತರಲು ಹೋಗುತ್ತಿದ್ದಂತೆಯೇ ಚಾಲಕ ತಕ್ಷಣವೇ ಕಾರನ್ನು ವೇಗವಾಗಿ ಚಲಿಸಿಕೊಂಡು ಪರಾರಿಯಾಗಿದ್ದಾರೆ.  ಆದಾಗ್ಯೂ, ಸಿಬ್ಬಂದಿ ಕಾರನ್ನು ತಡೆಯಲು ಯತ್ನಿಸಿದರೂ, ಅತಿ ವೇಗದಲ್ಲಿದ್ದ ಕಾರನ್ನು ಹಿಡಿಯಲು ಸಾಧ್ಯವಾಗಿಲ್ಲ.
ಆದಾಗ್ಯೂ, ಇಡೀ ಘಟನೆ ಪೆಟ್ರೋಲ್ ಬಂಕ್​ನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಚಾಲಕ ವಾಹನದಿಂದ ಇಳಿದು ಸಾಮಾನ್ಯವಾಗಿ ವರ್ತಿಸುತ್ತಾ, ನಂತರ ಇದ್ದಕ್ಕಿದ್ದಂತೆಯೇ ವೇಗವಾಗಿ ಚಲಿಸುತ್ತಿರುವ ದೃಶ್ಯಗಳನ್ನು ಸೆರೆಹಿಡಿದಿದೆ. 
ದೂರು ಸ್ವೀಕರಿಸಿದ ನಂತರ, ಪೊಲೀಸರು ತನಿಖೆ ಆರಂಭಿಸಿದ್ದು, ಸಿಸಿಟಿವಿ ದೃಶ್ಯಾವಳಿಗಳಿಂದ ಕಾರಿನ ನೋಂದಣಿ ಸಂಖ್ಯೆಯನ್ನು ಪತ್ತೆಹಚ್ಚಲು ಪ್ರಯತ್ನಿಸುತ್ತಿದ್ದೇವೆ. ಜೊತೆಗೆ  ಹತ್ತಿರದ ರಸ್ತೆಗಳು ಮತ್ತು ಪ್ರದೇಶಗಳಲ್ಲಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾಗಳನ್ನು ಸಹ ಪರಿಶೀಲಿಸಲಾಗುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ (ಏಜೆನ್ಸೀಸ್​). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net