ಅನೈತಿಕ ಸಂಬಂಧ ಶಂಕೆ; ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಗುವಿನ ಮುಂದೆಯೇ ಪತ್ನಿಯನ್ನು ಕೊಂದ ಪತಿ | illicit affair

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ಹೈದರಾಬಾದ್: ತೆಲಂಗಾಣದ ಹೈದರಾಬಾದ್​ನಲ್ಲಿ ಅನೈತಿಕ ಸಂಬಂಧದ(illicit affair) ಆರೋಪದ ಪತಿಯೊಬ್ಬ ತನ್ನ ಪತ್ನಿಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಮಗುವಿನ ಮುಂದೆಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಭಾನುವಾರ(ಮಾ. 22) ವರದಿಯಾಗಿದೆ.
ಹೈದರಾಬಾದ್​ನ ಹೊರವಲಯ ಶಾದ್‌ನಗರದಲ್ಲಿ ಶನಿವಾರ ರಾತ್ರಿ ಈ ಘಟನೆ ನಡೆದಿದೆ. ಮೃತ ಪತ್ನಿಯನ್ನು ದೇವುನಿಪಲ್ಲಿ ಗ್ರಾಮದ ನಿವಾಸಿ ಪೋತಲ ಶೋಭಾ ರಾಣಿ ಎಂದು ಗುರುತಿಸಲಾಗಿದೆ. ಆರೋಪಿ ಪತಿ ಮಹಬೂಬ್‌ನಗರ ಜಿಲ್ಲೆಯ ಕೊಯಲಕೊಂಡ ಗ್ರಾಮದ ರಂಜೀತ್ ಎನ್ನಲಾಗಿದೆ. ಇಬ್ಬರು 10 ವರ್ಷಗಳ ಹಿಂದೆ ಮದುವೆಯಾಗಿದ್ದರು. ದಂಪತಿಗೆ ಮೂವರು ಮಕ್ಕಳಿದ್ದಾರೆ.
ಕಳೆದ 2 ವರ್ಷಗಳಿಂದ ಅದೇ ಶಾದ್​ನಗರದ ನರಸಿಂಹಲು ಎಂಬ ವ್ಯಕ್ತಿಯೊಂದಿಗೆ ಶೋಭಾ ರಾಣಿ ಅಕ್ರಮ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ವಿಚಾರಕ್ಕೆ ಮನೆಯಲ್ಲಿ ದಂಪತಿ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಈ ಹಿನ್ನೆಲೆ ಪತ್ನಿ ಶೋಭಾ ಮಕ್ಕಳನ್ನು ಕರೆದುಕೊಂಡು ತವರುಮನೆ ಹೋಗಿದ್ದಳು ಎನ್ನಲಾಗಿದೆ.
ಶನಿವಾರ ಪತಿ ರಂಜೀತ್, ಪತ್ನಿಗೆ ಕಾಲ್ ಮಾಡಿ ಭೇಟಿಯಾಗಿ ಕೆಲವು ವಿಷಯ ಮಾತನಾಡಬೇಕು ಬಾ ಎಂದು ಕರೆಸಿಕೊಂಡು, ಶಾದ್​ನಗರ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಲ್ಲಿಯೇ ಮಗುವಿನ ಮುಂದೆ ಪತ್ನಿ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿ, ಸ್ಥಳದಲ್ಲೇ ಮಗುವನ್ನು ಬಿಟ್ಟು ಪರಾರಿಯಾಗಿದ್ದಾನೆ.
ಭಾನುವಾರ, ಮಹಿಳೆ ಮೃತಪಟ್ಟಿರುವುದನ್ನು ಮತ್ತು ಮಗು ಅಳುತ್ತಿರುವುದನ್ನು ಗಮನಿಸಿದ ಸ್ಥಳೀಯ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಧಾವಿಸಿ ಶವವನ್ನು ಮರಣೋತ್ತರ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಪ್ರಕರಣ ದಾಖಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net