ಮೋಟರ್ ಕದ್ದ ಶಂಕೆ: ಇಬ್ಬರು ಯುವಕರನ್ನು ಕಂಬಕ್ಕೆ ಕಟ್ಟಿ ಕರೆಂಟ್ ಶಾಕ್ ನೀಡಿದ ಪಾಪಿಗಳು; ವಿಡಿಯೋ ವೈರಲ್ ಆಗ್ತಿದ್ದಂತೆ ಶಾಕ್ ಕೊಟ್ಟ ಪೊಲೀಸರು! Two Youths Given Electric Shocks
ಮೋಟರ್ ಕದ್ದ ಶಂಕೆಯ ಮೇಲೆ ಇಬ್ಬರು ಯುವಕರನ್ನು ಕಂಬಕ್ಕೆ ಕಟ್ಟಿ ಕರೆಂಟ್ ಶಾಕ್ ನೀಡಿದ ಕ್ರೂರಿಗಳು
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಮಧ್ಯಪ್ರದೇಶದ ರೈಸೇನ್‌ನಲ್ಲಿ ಅಮಾನವೀಯ ಘಟನೆ!
ಮೋಟರ್ ಕದ್ದ ಶಂಕೆಯ ಮೇಲೆ ಇಬ್ಬರು ಯುವಕರನ್ನು ಕಂಬಕ್ಕೆ ಕಟ್ಟಿ ಕರೆಂಟ್ ಶಾಕ್ ನೀಡಿದ ಕ್ರೂರಿಗಳು
ವಿಡಿಯೋ ವೈರಲ್ ಬೆನ್ನಲ್ಲೇ ಇಬ್ಬರ ಬಂಧನ
ರೈಸೇನ್: ಗದ್ದೆಯಲ್ಲಿದ್ದ ಮೋಟರ್ ಅನ್ನು ಕಳ್ಳತನ ಮಾಡಿದ್ದಾರೆಂಬ ಅನುಮಾನದ ಆಧಾರದಲ್ಲಿ ಇಬ್ಬರು ಯುವಕರನ್ನು ಕಂಬಕ್ಕೆ ಕಟ್ಟಿ ಇಲೆಕ್ಟ್ರಿಕ್ ಶಾಕ್ (Two Youths Given Electric Shocks) ನೀಡಿದ ಅಮಾನವೀಯ ಘಟನೆ ಮಧ್ಯಪ್ರದೇಶದ ರೈಸನ್ಲ್ಲಿ ವರದಿಯಾಗಿದೆ.
ಈ ಹಿಂಸೆ ನೀಡುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾನಲ್ಲಿ ವೈರಲ್ ಆದ ಹಿನ್ನಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಮಧ್ಯಪ್ರವೇಶಿದ ಹಿನ್ನಲೆ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಗದ್ದೆಗೆ ನೀರನ್ನು ಹಾಯಿಸಲು ಬಳಸುತ್ತಿದ್ದ ಮೋಟರ್ ಅನ್ನು ಕಳ್ಳತನ ಮಾಡಿದ್ದಾರೆಂಬ ಶಂಕೆಯ ಮೇಲೆ ಇಬ್ಬರು ಯುವಕರನ್ನು ಹೊಡೆದು, ಅವರನ್ನು ಕಂಬಕ್ಕೆ ಕಟ್ಟಿಹಾಕಿ ಕರೆಂಟ್ ಶಾಕ್ ನೀಡುತ್ತಿರುವುದನ್ನು ವೈರಲ್ ಆಗಿರುವ ವಿಡಿಯೋನಲ್ಲಿ ನೋಡಬಹುದಾಗಿದೆ.
ಕರೆಂಟ್ ಶಾಕ್ ನೀಡಿದಾಗ, ಯುವಕರು ಚೀರುವ, ಬೊಬ್ಬೆ ಹಾಕುವುದನ್ನು ಕೇಳಿಸಿಕೊಳ್ಳಬಹುದಾಗಿದೆ. ಈ ಘಟನೆ ರೈಸೇನ್ ಕೊಟ್ವಾಲಿ ಪೊಲೀಸ್ ಠಾಣೆ ವ್ಯಾಪ್ತಿಯ ಕರ್ಮೋಡಿಯಾ ಗ್ರಾಮದಲ್ಲಿ ನಡೆದಿದ್ದು, ಬಲಿಪಶುಗಳು ಧನಿಯಾಖೇಡಿ ಗ್ರಾಮದ ನಿವಾಸಿಗಳಾಗಿದ್ದು, ಬೈರಾಗಿ ಸಮುದಾಯಕ್ಕೆ ಸೇರಿದವರು ಎಂದು ಹೇಳಲಾಗುತ್ತಿದೆ.
ವನ್ಯಜೀವಿಗಳಿಂದ ಗದ್ದಗೆ ರಕ್ಷಣೆಗಾಗಿ ಬಳಸಲಾಗುವ ಕರೆಂಟ್ಅನ್ನು ಮನುಷ್ಯರ ಮೇಲೆ ಪ್ರಯೋಗ ಮಾಡಿದ ಹಿನ್ನಲೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ಸ್ಥಳೀಯ ಪೊಲೀಸರಿಗೆ ಕೂಡಲೇ ಕ್ರಮ ಕೈಗೊಳ್ಳಲು ತಿಳಿಸಿದೆ.
ರಾಷ್ಟ್ರೀಯ ಮಾನವ ಹಕ್ಕು ಆಯೋಗದ ದೂರನ್ನು ಆಧರಿಸಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಡಿಪಿಯೋ ಪ್ರತಿಭಾ ಶರ್ಮಾ ತಿಳಿಸಿದ್ದಾರೆ. ಈ ಘಟನೆ ಜುಲೈ 4 ರಂದು ನಡೆದಿದ್ದು, ಗದ್ದೆಗೆ ನೀರು ಹಾಯಿಸಲು ಬಳಸುತ್ತಿದ್ದ ಮೋಟರ್ನ್ನು ಕದ್ದಿದ್ದಾರೆಂದು ಬಂಧಿತ ಆರೋಪಿಗಳು ಕರೆಂಟ್ ಶಾಕ್ ನೀಡಿದ್ದಾರೆ. ಸದ್ಯ ವಿಚಾರಣೆ ನಡೆಯುತ್ತಿದ್ದು, ಕಠಿಣ ಕ್ರಮವನ್ನು ತೆಗೆದುಕೊಳ್ಳುವುದಾಗಿ ಪ್ರತಿಭಾ ಶರ್ಮಾ ತಿಳಿದಿದ್ದಾರೆ, (ಏಜನ್ಸೀಸ್).