ಈ ಕುರಿತು ಮಾತನಾಡಿರುವ ಸ್ಥಳೀಯ ಪೊಲೀಸರು, ಆರೋಪಿ ಪತಿ ಭೇಟಿಯಾದ ಸ್ವಲ್ಪ ಸಮಯದ ನಂತರ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಈ ವೇಳೆ ಹಠಾತ್ ದಾಳಿಯಲ್ಲಿ, ಬಾಲಮುರುಗನ್ ಚಾಕು ಹೊರತೆಗೆದು ಹಾಸ್ಟೆಲ್ನಲ್ಲಿ ಆಕೆಯನ್ನು ಇರಿದು ಕೊಂದಿದ್ದಾನೆ. ಬಳಿಕ ಅವನು ಆಕೆಯ ದೇಹದೊಂದಿಗೆ ಸೆಲ್ಫಿ ತೆಗೆದುಕೊಂಡು ಅದನ್ನು ತನ್ನ ವಾಟ್ಸಾಪ್ ಸ್ಟೇಟಸ್ ಆಗಿ ಅಪ್ಲೋಡ್ ಮಾಡಿ, ಆಕೆ ತನಗೆ "ದ್ರೋಹ" ಮಾಡಿದ್ದಾಳೆಂದು ಬರೆದುಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.