ಪಂದ್ಯದ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದ ವೈಭವ್ ಸೂರ್ಯವಂಶಿ, ಹೈದರಾಬಾದ್ ಬೌಲರ್‌ಗಳನ್ನು ಕಂಗೆಡಿಸಿದರು. ಮೈದಾನದ ಮೂಲೆ ಮೂಲೆಗೂ ಬೌಂಡರಿ, ಸಿಕ್ಸರ್‌ಗಳ ಸುರಿಮಳೆಗರೆದ ಅವರು ಕೇವಲ 37 ಎಸೆತಗಳಲ್ಲಿ 103 ರನ್ ಚಚ್ಚಿದರು. ಸೂರ್ಯವಂಶಿ ಜತೆಗೆ ಧ್ರುವ್ ಜುರೆಲ್ 51 ಗಳಿಸಿ ತಂಡಕ್ಕೆ ಮೊತ್ತವನ್ನು ಹೆಚ್ಚಿಸಿದರು. ಉಭಯ ಆಟಗಾರರ ಈ ಅದ್ಭುತ ಇನಿಂಗ್ಸ್ ರಾಜಸ್ಥಾನ ರಾಯಲ್ಸ್ ಬೃಹತ್ ಮೊತ್ತದ ಅಡಿಪಾಯ ಹಾಕಲು ನೆರವಾಯಿತು. ಸೂರ್ಯವಂಶಿ ಔಟಾದ ನಂತರ ಶಿಮ್ರಾನ್ ಹೆಟ್ಮೆಯರ್ ಅಂತಿಮ ಹಂತದವರೆಗೆ ಕ್ರೀಸ್‌ನಲ್ಲಿ ನಿಂತು ತಂಡದ ಸ್ಕೋರ್ ಅನ್ನು 220ರ ಗಡಿ ದಾಟಿಸಿದರು.