ಉತ್ತರ ಪ್ರದೇಶದ ಗಾಜಿಯಾಬಾದ್ ಮೂಲದ ಈ ಯುವಕ, 12 ವರ್ಷಗಳ ಹಿಂದೆ ಕಟ್ಟಡವೊಂದರಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದನು. ಅಂದಿನಿಂದ ಆತ ಸಂಪೂರ್ಣವಾಗಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು, ಕೇವಲ ಯಂತ್ರೋಪಕರಣಗಳ ಸಹಾಯದಿಂದ ಜೀವ ಹಿಡಿದಿದ್ದನು. ಆತನ ಚೇತರಿಕೆಯ ಯಾವುದೇ ಸಾಧ್ಯತೆ ಇಲ್ಲದ ಕಾರಣ, ಮಗನ ನರಳಾಟವನ್ನು ನೋಡಲಾರದೆ ಆತನ ತಂದೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. "ನನ್ನ ಮಗನಿಗೆ ಘನತೆಯಿಂದ ಸಾಯುವ ಹಕ್ಕನ್ನು ನೀಡಬೇಕು" ಎಂದು ಅವರು ಅರ್ಜಿಯಲ್ಲಿ ವಿನಂತಿಸಿದ್ದರು.