ಮಾಜಿ ಸಚಿವ ಮಾಣಿಕ್​ ರಾವ್ ಕೊಕಟೆ ವಿರುದ್ಧದ ಶಿಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್​; ಷರತ್ತು ಅನ್ವಯ | Manik Rao Kokate

ಮಾಜಿ ಸಚಿವ ಮಾಣಿಕ್‌ರಾವ್ ಕೊಕಟೆ
ಮಾಜಿ ಸಚಿವ ಮಾಣಿಕ್‌ರಾವ್ ಕೊಕಟೆ
Published on
ನವದೆಹಲಿ: ವಂಚನೆ ಮತ್ತು ನಕಲಿ ದಾಖಲೆ ಸೃಷ್ಟಿ ಪ್ರಕರಣದಲ್ಲಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರದ ಮಾಜಿ ಸಚಿವ ಮಾಣಿಕ್‌ರಾವ್ ಕೊಕಟೆ(Manik Rao Kokate) ಅವರಿಗೆ ಕೆಳ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ಸೋಮವಾರ(ಡಿ. 22) ತಡೆ ನೀಡಿದೆ.
ಸರ್ಕಾರಿ ವಸತಿ ಯೋಜನೆಗೆ ಸಂಬಂಧಿಸಿದ ವಂಚನೆ ಮತ್ತು ನಕಲಿ ಪ್ರಕರಣದಲ್ಲಿ ಕೊಕಟೆ ಅವರಿಗೆ ಮ್ಯಾಜಿಸ್ಟ್ರೇಟ್ ಕೋರ್ಟ್ನೀ ದೋಷಿ ಎಂದು ತೀರ್ಪು ನೀಡಿ ಶಿಕ್ಷೆ ವಿಧಿಸಿತ್ತು. ಅದನ್ನು ನಾಸಿಕ್ ಜಿಲ್ಲಾ ಕೋರ್ಟ್ ಎತ್ತಿ ಹಿಡಿದಿತ್ತು. ಅದಕ್ಕೆ ತಡೆಕೊಡಲು ನಿರಾಕರಿಸಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.
ಸಿಜೆಐ ಸೂರ್ಯ ಕಾಂತ್ ಮತ್ತು ನ್ಯಾ. ಜೋಯ್ಮಲ್ಯ ಬಾಗ್ಚಿ ನೇತೃತ್ವದ ಇಬ್ಬರು ನ್ಯಾಯಾಧೀಶರ ರಜಾ ಪೀಠ ಇಂದು ವಿಚಾರಣೆ ನಡೆಸಿ, ಮಹಾರಾಷ್ಟ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ. ಜೊತೆಗೆ ಶಿಕ್ಷೆಗೆ ಒಳಗಾಗಿರುವ ಶಾಸಕ ಮಾಣಿಕ್ರಾವ್ ಕೊಕಟೆ ಅವರು ರಾಜ್ಯ ವಿಧಾನಸಭೆಯ ಸದಸ್ಯತ್ವ ಅನರ್ಹವಾಗದಂತೆ ತಡೆಹಿಡಿಯಲಾಗುವುದು. ಆದಾಗ್ಯೂ, ಅವರು ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಲು ಅರ್ಹತೆ ನೀಡುವುದಿಲ್ಲ. ಯಾವುದೇ ಲಾಭದಾಯಕ ಹುದ್ದೆಯನ್ನು ಹೊಂದಬಾರದು ಎಂದು ಷರತ್ತು ವಿಧಿಸಿದೆ.
ಕೊಕಟೆ ಪರ ಹಾಜರಾದ ಹಿರಿಯ ವಕೀಲ ಮತ್ತು ಭಾರತದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ, ಕೊಕಟೆ ಐದು ಬಾರಿ ಶಾಸಕರಾಗಿದ್ದಾರೆ, ಪ್ರಸ್ತುತ ಸಚಿವರಾಗಿದ್ದರು. ಯಾವುದೇ ಕ್ರಿಮಿನಲ್ ಹಿನ್ನೆಲೆಗಳಿಲ್ಲ ಎಂದು ವಾದಿಸಿದರು.
ಈ ವರ್ಷದ ಫೆಬ್ರವರಿಯಲ್ಲಿ ಕೊಕಟೆ ಅವರ ಅಪರಾಧ ಸಾಬೀತು ಮತ್ತು ಮ್ಯಾಜಿಸ್ಟ್ರೇಟ್ ವಿಧಿಸಿದ ಎರಡು ವರ್ಷಗಳ ಜೈಲು ಶಿಕ್ಷೆಯನ್ನು ಕಳೆದ ಮಂಗಳವಾರ ನಾಸಿಕ್ ಸೆಷನ್ಸ್ ನ್ಯಾಯಾಲಯ ಎತ್ತಿಹಿಡಿದಿತ್ತು. ತನ್ನ ಶಿಕ್ಷೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದ್ದನ್ನು ಪ್ರಶ್ನಿಸಿ, ಕೊಕಟೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net