ಆಗ ನ್ಯಾ. ಸೂರ್ಯಕಾಂತ್, ನೀವು ಐಆರ್ಎಸ್ ಅಧಿಕಾರಿಯಾಗಿದ್ದಿರಿ. ದೆಹಲಿಗೆ ಬಂದು ಸ್ವತಃ ಹಾಜರಾಗಲು ನಿಮಗೆ ಸಾಮರ್ಥ್ಯವಿದೆ. ನೀವು ನಿಮ್ಮನ್ನು ಏನೆಂದುಕೊಂಡಿದ್ದೀರಿ? ಎಂದು ಕಟುವಾಗಿ ಪ್ರತಿಕ್ರಿಯಿಸಿದರು. ಬಲಮುರಗನ್, ಇದು ಸಾರ್ವಜನಿಕ ಹಿತಾಸಕ್ತಿಯಿಂದ ಸಲ್ಲಿಸಿದ ಅರ್ಜಿಯಾಗಿದ್ದು ಇದಕ್ಕೆ ನೀವು ನ್ಯಾಯ ದೊರಕಿಸಬೇಕು ಎಂದಾಗ, ಕೆರಳಿದ ನ್ಯಾಯಮೂರ್ತಿಗಳು ಮೊದಲು ನೀವು ಲಕ್ಷ ದಂಡ ಜಮಾ ಮಾಡಿ, ಆಗ ಸಾರ್ವಜನಿಕ ಹಿತಾಸಕ್ತಿ ಎಂದರೇನು ಎಂಬುದನ್ನು ತಿಳಿಸಿಕೊಡುತ್ತೇವೆ.