ಇಡೀ ದಿನ ಪಟಾಕಿ ಸಿಡಿಸಲು ಅವಕಾಶವಿಲ್ಲ! ದೀಪಾವಳಿ ಹಬ್ಬಕ್ಕೂ ಮುನ್ನವೇ ಜನರಿಗೆ 'ಸುಪ್ರೀಂ' ಅಲರ್ಟ್​ | Diwali Firecracker

ಪಟಾಕಿ ಹೊಡೆಯಲು ನಿರ್ದಿಷ್ಟ ಸಮಯವನ್ನು ನಿಗದಿಪಡಿಸುವುದರ ಜತೆಗೆ, ಯಾವ ರೀತಿಯ ಪಟಾಕಿಗಳನ್ನು ಬಳಸಬಹುದು ಎಂಬುದನ್ನು ಕೂಡ ಸ್ಪಷ್ಟವಾಗಿ ಸೂಚಿಸುವುದಾಗಿ ನ್ಯಾಯಾಲಯ ಹೇಳಿದೆ.
firecracker
1 ದಿನ ಪೂರ್ತಿ ಪಟಾಕಿ ಸಿಡಿಸಲು ಅವಕಾಶವಿಲ್ಲ! ದೀಪಾವಳಿ ಹಬ್ಬಕ್ಕೂ ಮುನ್ನವೇ ಜನರಿಗೆ 'ಸುಪ್ರೀಂ' ಅಲರ್ಟ್​
Published on: 
  • ದೀಪಾವಳಿ ಪಟಾಕಿಗಳ ಕುರಿತು ಸುಪ್ರೀಂ ಕೋರ್ಟ್‌ ಪ್ರಮುಖ ಅಭಿಪ್ರಾಯಗಳನ್ನು ಕೊಟ್ಟಿದೆ

  • ದೇಶದ ಯಾವ ಭಾಗದಲ್ಲಿಯೂ 24 ಗಂಟೆಗಳ ಕಾಲ ಪಟಾಕಿ ಸಿಡಿಸಲು ಅನುಮತಿಯಿಲ್ಲ

  • ಪಟಾಕಿ ಹೊಡೆಯಲು ನಿರ್ದಿಷ್ಟ ಸಮಯ ಫಿಕ್ಸ್ ಮಾಡಿದ ನ್ಯಾಯಾಲಯ

ನವದೆಹಲಿ: ದೀಪಾವಳಿ ಪಟಾಕಿಗಳ ಬಳಕೆಯ ಕುರಿತು ಸುಪ್ರೀಂ ಕೋರ್ಟ್ ಪ್ರಮುಖ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದೆ. ದೇಶಾದ್ಯಂತ ಪಟಾಕಿಗಳ ಮೇಲೆ ಸಂಪೂರ್ಣ ನಿಷೇಧ ಹೇರುವುದಕ್ಕೆ ಒಪ್ಪಿಗೆ ಸೂಚಿಸದ ನ್ಯಾಯಾಲಯ, ಇದರಿಂದ ಸಮಾಜದ ಕೆಲವು ವರ್ಗಗಳ ಭಾವನೆಗಳಿಗೆ ಧಕ್ಕೆಯಾಗಬಹುದು ಎಂದು ಸೂಕ್ಷ್ಮವಾಗಿ ತಿಳಿಸಿದೆ.

24 ಗಂಟೆಗಳ ಕಾಲ ಎಲ್ಲಿಯೂ ಪಟಾಕಿ ಸಿಡಿಸಲು ಅನುಮತಿ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದ್ದು, ಪಟಾಕಿ ಸಿಡಿಸುವುದರಿಂದ ರೋಗಿಗಳು, ವೃದ್ಧರು ಮತ್ತು ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದೆ. ಪಟಾಕಿ ಹೊಡೆಯಲು ನಿರ್ದಿಷ್ಟ ಸಮಯವನ್ನು ನಿಗದಿಪಡಿಸುವುದರ ಜತೆಗೆ, ಯಾವ ರೀತಿಯ ಪಟಾಕಿಗಳನ್ನು ಬಳಸಬಹುದು ಎಂಬುದನ್ನು ಕೂಡ ಸ್ಪಷ್ಟವಾಗಿ ಸೂಚಿಸುವುದಾಗಿ ನ್ಯಾಯಾಲಯ ಹೇಳಿದೆ.

Also Read
1 ಕೋಟಿ ರೂ. ಕ್ಯಾಶ್​, ಲಕ್ಸುರಿ ವಾಚ್‌ಗಳ ರಾಶಿ... ಅಧಿಕಾರಿ ದಂಪತಿಯ ಮನೆಯಲ್ಲಿ ಸಿಕ್ಕ ಆಸ್ತಿ ಕಂಡು ವಿಜಿಲೆನ್ಸ್ ತಂಡವೇ ಶಾಕ್ | Bureaucrat Couple
firecracker

ಬೇರಿಯಮ್ ಪರೀಕ್ಷೆಗಳು, ಜಂಟಿ ಪಟಾಕಿ ಪರೀಕ್ಷೆಗಳು ಮತ್ತು ಪಟಾಕಿಗಳ ಶಬ್ದದ ತೀವ್ರತೆಗೆ ಸಂಬಂಧಿಸಿದ ಡೆಸಿಬಲ್ ಪರೀಕ್ಷೆಗಳನ್ನು ನಡೆಸಲು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (CPCB) ಹಾಗೂ ಕೇಂದ್ರ ಸರ್ಕಾರಕ್ಕೆ ಕೋರ್ಟ್ ಹೆಚ್ಚಿನ ಸಮಯವನ್ನು ನೀಡಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಲಾಗಿದೆ.(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net