ತಜ್ಞ ಸಮಿತಿಯು ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಪರಿಶೀಲನೆ ನಡೆಸಿ ಪರಿಷ್ಕೃತ ಆದ್ಯತಾ ಸಂರಕ್ಷಣಾ ಪ್ರದೇಶಗಳನ್ನು ಗುರುತಿಸಿದೆ. ಅದರಂತೆ, ರಾಜಸ್ಥಾನದಲ್ಲಿ 14,013 ಚ.ಕಿ.ಮೀ. ಮತ್ತು ಗುಜರಾತ್‌ನಲ್ಲಿ 740 ಚ.ಕಿ.ಮೀ. ಪ್ರದೇಶಗಳನ್ನು ಹೆಬ್ಬಕ ಸಂರಕ್ಷಣೆಗೆ ಆದ್ಯತೆ ನೀಡಬೇಕೆಂದು ಘೋಷಿಸಲಾಗಿದೆ. ರಾಜಸ್ಥಾನದಲ್ಲಿ 33 ಕಿ.ವಿ. ಸಾಮರ್ಥ್ಯದ 80 ಕಿ.ಮೀ. ಮತ್ತು ಗುಜರಾತ್‌ನಲ್ಲಿ 79 ಕಿ.ಮೀ. ವಿದ್ಯುತ್ ಲೈನ್‌ಗಳನ್ನು ಭೂಗತಗೊಳಿಸುವುದು, ಹಲವು 66 ಕಿ.ವಿ. ಲೈನ್‌ಗಳನ್ನು ಮರುಮಾರ್ಗಗೊಳಿಸುವುದು, ಹಾಗೂ ಆದ್ಯತಾ ಪ್ರದೇಶಗಳೊಳಗೆ 2 ಮೆಗಾವಾಟ್‌ಗಿಂತ ಹೆಚ್ಚಿನ ಸಾಮರ್ಥ್ಯದ ಹೊಸ ಗಾಳಿಯಂತ್ರಗಳು ಅಥವಾ ಸೌರ ಉದ್ಯಾನಗಳಿಗೆ ಸಂಪೂರ್ಣ ನಿಷೇಧ ವಿಧಿಸುವುದು ಜೊತೆಗೆ, ವನ್ಯಜೀವಿ ಸಂಸ್ಥೆ ಗುರುತಿಸಿರುವ 250 ಕಿ.ಮೀ. ಉಚ್ಚ ಅಪಾಯದ ವಿದ್ಯುತ್ ಲೈನ್‌ಗಳನ್ನು ಎರಡು ವರ್ಷಗಳೊಳಗೆ ಭೂಗತಗೊಳಿಸುವುದ ಸೇರಿದಂತೆ ಸಮಿತಿ ಸೂಚಿಸಿದ್ದ ಪ್ರಮುಖ ಕ್ರಮಗಳ ಜಾರಿಗೆ ಸಮ್ಮತಿಸಿದೆ.