ಕಾಂಗ್ರೆಸ್, ಟಿಎಂಸಿ ಮತ್ತು ಎಸ್‌ಪಿ ಸೇರಿದಂತೆ ವಿರೋಧ ಪಕ್ಷಗಳು ಕೂಡ ಈ ವಿಷಯದ ಬಗ್ಗೆ ಕಳವಳ ವ್ಯಕ್ತಪಡಿಸಿವೆ ಮತ್ತು ಸರ್ಕಾರ ಮತ್ತು ಚುನಾವಣಾ ಆಯೋಗವನ್ನು ಟೀಕಿಸಿವೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಸ್‌ಐಆರ್ ದೇಶದ ನಾಗರಿಕರನ್ನು ಕಿರುಕುಳ ನೀಡಲು ಹೇರಿದ ದಬ್ಬಾಳಿಕೆ ಎಂದು ಕರೆದಿದ್ದರು. ಮೂರು ವಾರಗಳಲ್ಲಿ ಹದಿನಾರು ಬಿಎಲ್‌ಒಗಳು ಪ್ರಾಣ ಕಳೆದುಕೊಂಡಿದ್ದಾರೆ. ಹೃದಯಾಘಾತ, ಒತ್ತಡ, ಆತ್ಮಹತ್ಯೆ. ಎಸ್‌ಐಆರ್ ಸುಧಾರಣೆಯಲ್ಲ, ಅದು ಹೇರಿದ ದಬ್ಬಾಳಿಕೆ ಎಂದು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ಮಧ್ಯಪ್ರದೇಶ, ಉತ್ತರ ಪ್ರದೇಶ, ಗುಜರಾತ್, ಪಶ್ಚಿಮ ಬಂಗಾಳ, ರಾಜಸ್ಥಾನ, ತಮಿಳುನಾಡು ಮತ್ತು ಕೇರಳದಲ್ಲಿ ಎಸ್‌ಐಆರ್ ಸಂಬಂಧಿತ ಸಾವುಗಳು ವರದಿಯಾಗಿವೆ(ಏಜೆನ್ಸೀಸ್).