ದುಬೈನಲ್ಲಿ ಕ್ಷಿಪಣಿ ಭೀತಿ: ಒಂದು ಪ್ರೈವೇಟ್ ಜೆಟ್‌ಗೆ 3.2 ಕೋಟಿ! ಪ್ರಾಣ ಉಳಿಸಿಕೊಳ್ಳಲು ಸೌದಿ ಮೂಲಕ ಶ್ರೀಮಂತರ ಪಲಾಯನ.. Iran Israel Conflict

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ದುಬೈ ಮತ್ತು ಅಬುಧಾಬಿಯ ಮೇಲೆ ಇತ್ತೀಚೆಗೆ ನಡೆದ ಇರಾನಿನ ಕ್ಷಿಪಣಿ ಮತ್ತು ಡ್ರೋನ್ ದಾಳಿ
  • ಅಂತರಾಷ್ಟ್ರೀಯ ಕಂಪನಿಗಳ ಉನ್ನತ ಅಧಿಕಾರಿಗಳು ಸುರಕ್ಷಿತ ಸ್ಥಳಗಳಿಗೆ ತೆರಳಲು ಪರದಾಟ
  • ಮಧ್ಯಪ್ರಾಚ್ಯದಿಂದ ಖಾಸಗಿ ಜೆಟ್‌ಗಳನ್ನು ಬಾಡಿಗೆಗೆ ಪಡೆಯಲು ಸುಮಾರು 3,20,87,142 ರೂಗಳಿಗಿಂತ ಹೆಚ್ಚು ಹಣ ಖರ್ಚು
Iran Israel Conflict: ದುಬೈ ಮತ್ತು ಅಬುಧಾಬಿಯ ಮೇಲೆ ಇತ್ತೀಚೆಗೆ ನಡೆದ ಇರಾನಿನ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳ ಹಿನ್ನೆಲೆ, ಗಲ್ಫ್ ಪ್ರದೇಶದ ಶ್ರೀಮಂತ ನಿವಾಸಿಗಳು ಮತ್ತು ಅಂತರಾಷ್ಟ್ರೀಯ ಕಂಪನಿಗಳ ಉನ್ನತ ಅಧಿಕಾರಿಗಳು ಸುರಕ್ಷಿತ ಸ್ಥಳಗಳಿಗೆ ತೆರಳಲು ಪರದಾಡುತ್ತಿದ್ದಾರೆ. ಈ ಹಠಾತ್ ಬೆಳವಣಿಗೆಯಿಂದಾಗಿ ಖಾಸಗಿ ಜೆಟ್ ವಿಮಾನಗಳ ಬೇಡಿಕೆ ಗಗನಕ್ಕೇರಿದ್ದು, ಅವುಗಳ ಬಾಡಿಗೆ ದರಗಳು ಹಿಂದೆಂದೂ ಕಾಣದ ದಾಖಲೆ ಮಟ್ಟಕ್ಕೆ ತಲುಪಿವೆ.
ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಮಧ್ಯಪ್ರಾಚ್ಯದಿಂದ ಖಾಸಗಿ ಜೆಟ್‌ಗಳನ್ನು ಬಾಡಿಗೆಗೆ ಪಡೆಯಲು ಸುಮಾರು 3,20,87,142 ರೂಗಳಿಗಿಂತ ಹೆಚ್ಚು ಹಣವನ್ನು ಖರ್ಚು ಮಾಡುತ್ತಿದ್ದಾರೆ. ಆದಾಗ್ಯೂ, ಯುರೋಪ್​ಗೆ ಖಾಸಗಿ ವಿಮಾನದಲ್ಲಿ ಆಸನ ಪಡೆಯಲು 10 ಗಂಟೆಗಳ ಕಾಲ ರಸ್ತೆಯ ಮೂಲಕ ಪ್ರಯಾಣಿಸಿ ಸೌದಿ ಅರೇಬಿಯಾಕ್ಕೆ ತಲುಪುತ್ತಿದ್ದಾರೆ ಎಂದು ತಿಳಿಸಿದೆ.
ಯುದ್ಧ ಪ್ರದೇಶದಿಂದ ಹೊರಬರಲು ಬಯಸುವವರಿಗೆ ಸೌದಿ ಅರೇಬಿಯಾ ಬೆಸ್ಟ್​ ಆಯ್ಕೆಯಾಗಿದೆ ಎಂದು ಖಾಸಗಿ ಜೆಟ್ ಬ್ರೋಕರೇಜ್ ವಿಮಾನ ಪ್ರೈವೇಟ್‌ನ ಮುಖ್ಯ ಕಾರ್ಯನಿರ್ವಾಹಕ ಅಮೀರ್ ನರನ್ ಮೂಲಗಳಿಗೆ ತಿಳಿಸಿದ್ದಾರೆ.
ಕುಟುಂಬಗಳು, ವ್ಯಕ್ತಿಗಳು ಮತ್ತು ನಿಗಮಗಳು ಸೇರಿದಂತೆ ಅನೇಕ ಗ್ರಾಹಕರು ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಈ ಜನರು ಕೇವಲ ಹಣದ ಬಗ್ಗೆ ಯೋಚಿಸುತ್ತಿಲ್ಲ. ಬದಲಿಗೆ ಸಮಯ ಮತ್ತು ಸುರಕ್ಷತೆಯನ್ನು ಬಯಸುತ್ತಿದ್ದಾರೆ. ಈಗಾಗಲೇ ದೊಡ್ಡ ಕಂಪನಿಗಳು ತಮ್ಮ ಮುಖ್ಯ ಕಾರ್ಯನಿರ್ವಾಹಕರನ್ನು (CEOs) ಸುರಕ್ಷಿತವಾಗಿ ಸ್ಥಳಾಂತರಿಸಲು ಭದ್ರತಾ ಸಂಸ್ಥೆಗಳೊಂದಿಗೆ ಲಕ್ಷಾಂತರ ಡಾಲರ್ ಮೊತ್ತದ ಒಪ್ಪಂದ ಮಾಡಿಕೊಳ್ಳುತ್ತಿವೆ. ಆದಾಗ್ಯೂ, ಕ್ಷಿಪಣಿ ದಾಳಿಗಳ ನಂತರ ವಿಮಾನಯಾನ ಸಂಸ್ಥೆಗಳು ತಮ್ಮ ಮಾರ್ಗಗಳನ್ನು ಬದಲಿಸುತ್ತಿರುವುದು ಮತ್ತು ವಿಮಾನ ದರಗಳು ಏರಿಕೆಯಾಗಿರುವುದು ಪ್ರಯಾಣವನ್ನು ಮತ್ತಷ್ಟು ಕಷ್ಟಕರವಾಗಿಸಿದೆ ಎಂದರು.

ಸೌದಿ ಅರೇಬಿಯಾ: ಏಕೈಕ ನಿಜವಾದ ಆಯ್ಕೆ

ಗಲ್ಫ್ ಪ್ರದೇಶದಲ್ಲಿ ಉಂಟಾಗಿರುವ ಪ್ರಸ್ತುತ ಉದ್ವಿಗ್ನತೆಯ ನಡುವೆ, ಸೌದಿ ಅರೇಬಿಯಾದ ರಿಯಾದ್ ವಿಮಾನ ನಿಲ್ದಾಣ ಈಗ ಒಂದು ನಿರ್ಣಾಯಕ 'ಸುರಕ್ಷಿತ ನಿರ್ಗಮನ ತಾಣವಾಗಿದೆ. ಸೆಮಾಫೋರ್ ವರದಿಗಳ ಪ್ರಕಾರ, ದುಬೈ, ಅಬುಧಾಬಿ, ಕತಾರ್ ಮತ್ತು ಬಹ್ರೇನ್‌ನಿಂದ ಸಿಲುಕಿಕೊಂಡಿರುವ ನಿವಾಸಿಗಳು ಖಾಸಗಿ ಜೆಟ್‌ಗಳು ಅಥವಾ ವಾಣಿಜ್ಯ ವಿಮಾನಗಳಲ್ಲಿ ಪ್ರಯಾಣಿಸಲು ಸುಮಾರು 10 ಗಂಟೆಗಳ ದೀರ್ಘ ಪ್ರಯಾಣ ನಡೆಸುತ್ತಿದ್ದಾರೆ.
ಜನರನ್ನು ಸುಗಮವಾಗಿ ಸಾಗಿಸಲು ಖಾಸಗಿ ಭದ್ರತಾ ಕಂಪನಿಗಳು ದುಬೈನಿಂದ ರಿಯಾದ್‌ಗೆ SUV ಗಳ ಫ್ಲೀಟ್‌ಗಳನ್ನು ಬಾಡಿಗೆಗೆ ಪಡೆಯುತ್ತಿವೆ. ರಿಯಾದ್‌ನ ನಗರ ಕೇಂದ್ರದಿಂದ ಸುಮಾರು 35 ಕಿ.ಮೀ ದೂರದಲ್ಲಿರುವ ಕಿಂಗ್ ಖಾಲಿದ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಸ್ಥಳಾಂತರಿಸುವ ಪ್ರಯತ್ನಗಳಿಗೆ ಪ್ರಾಥಮಿಕ ಕೇಂದ್ರವಾಗಿದೆ. ಇದು 5 ಟರ್ಮಿನಲ್​ಗಳನ್ನು ಹೊಂದಿದ್ದು, ಯುರೋಪ್, ಅಮೆರಿಕ, ಏಷ್ಯಾ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾಕ್ಕೆ ವಿಮಾನಗಳನ್ನು ಕಳುಹಿಸುತ್ತಿದೆ.
ತುರ್ತು ನಿರ್ಗಮನ ಮಾರ್ಗವಾಗಿ ರಿಯಾದ್‌ನ ಆಕರ್ಷಣೆಗೆ ಸೌದಿ ಅರೇಬಿಯಾದಲ್ಲಿ ವೀಸಾ ನಿಯಮಗಳನ್ನು ಸುಲಭಗೊಳಿಸಿದೆ. ಆದಾಗ್ಯೂ, ಅನೇಕ ರಾಷ್ಟ್ರೀಯತೆಗಳು ಮುಂಚಿತವಾಗಿ ವೀಸಾ ಪಡೆಯುವ ಬದಲಿಗೆ ಆಗಮನದ ನಂತರವೂ ವೀಸಾ ಪಡೆಯಬಹುದಾಗಿದೆ. ಬಂದರು ಮತ್ತು ತೈಲ ಟ್ಯಾಂಕರ್ ಮೇಲಿನ ದಾಳಿಯಿಂದಾಗಿ ಒಮಾನ್​ ಮೂಲಕ ಸ್ಥಳಾಂತರಿಸುವ ಮಾರ್ಗಗಳು ಸ್ಥಗಿತಗೊಂಡಿರುವುದರಿಂದ ರಿಯಾದ್ ಸುರಕ್ಷಿತ ಸ್ಥಳ ಎಂದು ಕರೆಯಲಾಗಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net