ಸ್ಮೃತಿ ಮಂಧಾನಾಗಾಗಿ WBBL ನಿಂದ ಹಿಂದೆ ಸರಿದ ಜೆಮಿಮಾ ರೊಡ್ರಿಗಸ್ ನಿರ್ಧಾರವನ್ನು ಶ್ಲಾಘಿಸಿದ ಸುನೀಲ್ ಶೆಟ್ಟಿ! smriti mandhana

Suniel Shetty
Suniel Shetty
Published on
ಮುಂಬೈ: ಕ್ರಿಕೆಟ್ ಆಟಗಾರ್ತಿ ಸ್ಮೃತಿ ಮಂಧಾನ (smriti mandhana ) ಹಾಗೂ ಪಲಾಶ್ ಮುಚ್ಚಲ್ ವಿವಾಹ ಮುಂದೂಡಿಕೆಯಾಗಿದ್ದು ಗೊತ್ತಿರುವ ವಿಚಾರ. ಈ ಸುದ್ದಿ ಬೆನ್ನಲ್ಲೇ ಭಾರತೀಯ ಮಹಿಳಾ ತಂಡದ ಸ್ಟಾರ್ ಆಟಗಾರ್ತಿ ಜೆಮಿಮಾ ರೊಡ್ರಿಗಸ್ ಮಂಧಾನ ಅವರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲಲು ಭಾರತದಲ್ಲಿಯೇ ಇರಲು ಜೆಮಿಮಾ ನಿರ್ಧರಿಸಿ ಪ್ರಮುಖ ನಿರ್ಧಾರವೊಂದನ್ನು ಕೈಗೊಂಡಿದ್ದನ್ನು ತಿಳಿದು ಬಾಲಿವುಡ್​ ನಟ ಸುನೀಲ್ ಶೆಟ್ಟಿ ಅವರ ನಿರ್ಧಾರವನ್ನು ಶ್ಲಾಘಿಸಿದ್ದಾರೆ.
ಆಸೀಸ್​ನಲ್ಲಿ ನಡೆಯಲಿರುವ ಬಿಗ್ ಬ್ಯಾಷ್ ಲೀಗ್​ನಿಂದ (WBBL) ಜೆಮಿಮಾ ರೊಡ್ರಿಗಸ್ ಹೊರಗುಳಿದಿದ್ದಾರೆ. ಮಹಿಳಾ ಬಿಗ್ ಬ್ಯಾಷ್ ಲೀಗ್‌ನ 11ನೇ ಸೀಸನ್ ನವೆಂಬರ್ 9ರಂದು ಪ್ರಾರಂಭವಾಯಿತು. ಇದರಲ್ಲಿ ಜೆಮಿಮಾ ಬ್ರಿಸ್ಬೇನ್ ಹೀಟ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಆದಾಗ್ಯೂ, ಸ್ಮೃತಿ ಮಂಧಾನ ಅವರ ವಿವಾಹದ ಕಾರಣ ಜೆಮಿಮಾ 10 ದಿನಗಳ ಹಿಂದೆಯೇ ಭಾರತಕ್ಕೆ ಮರಳಿದರು.
ಇಂತಹ ಕಷ್ಟದ ಸಮಯದಲ್ಲಿ ಸ್ಮೃತಿ ಮಂಧಾನ ಹಾಗೂ ಅವರ ಕುಟುಂಬದ ಜತೆಗಿರಲು ಜೆಮಿಮಾ ಲೀಗ್​ನಿಂದ ಹೊರನಡೆದಿದ್ದಾರೆ. ಜೆಮಿಮಾ ನಿಲುವಿನ ಬಗ್ಗೆ ಬ್ರಿಸ್ಬೇನ್ ಹೀಟ್ ಸಿಇಒ ಟೆರ್ರಿ ಸ್ವೆನ್ಸನ್ ಪ್ರತಿಕ್ರಿಯಿಸಿ: "ಪ್ರಸ್ತುತ ಪರಿಸ್ಥಿತಿಯಲ್ಲಿ ಸ್ಮೃತಿಗೆ ಬೆಂಬಲ ನೀಡುವ ಜೆಮಿಮಾ ಅವರ ನಿರ್ಧಾರವನ್ನು ನಾವು ಗೌರವಿಸುತ್ತೇವೆ. ಅವರು ತಂಡಕ್ಕೆ ಮರಳಲು ಸಾಧ್ಯವಾಗದಿದ್ದಕ್ಕೆ ನಿರಾಶೆಯಿದೆ" ಎಂದರು, ಸದ್ಯ ಅತೀವ ದುಃಖಕ್ಕೆ ಒಳಗಾಗಿರುವ ಗೆಳತಿಗೆ ಜೆಮಿಮಾ ಹೆಗಲು ಕೊಡಲು ಮುಂದಾಗಿದ್ದಾರೆ.
ಸುನೀಲ್ ಶೆಟ್ಟಿ ಹೇಳಿದ್ದೇನು?
ಕಠಿಣ ಹಂತದಲ್ಲಿ ತನ್ನ ಸ್ನೇಹಿತನ ಪಕ್ಕದಲ್ಲಿರಲು ಜೆಮಿಮಾ ತೆಗೆದುಕೊಂಡ ನಿರ್ಧಾರಕ್ಕೆ ಸುನೀಲ್ ಶೆಟ್ಟಿ ಪ್ರತಿಕ್ರಿಯಿಸಿದರು. ಪತ್ರಿಕೆಯ ತುಣುಕಿನ ಚಿತ್ರವನ್ನು ಹಂಚಿಕೊಂಡ ನಟ, "ಬೆಳಿಗ್ಗೆ ಈ ಲೇಖನವನ್ನು ಮೊದಲು ಓದಿದೆ ಮತ್ತು ನನ್ನ ಹೃದಯ ತುಂಬಿ ಬಂದಿತು. ಜೆಮಿಮಾ WBBL ಅನ್ನು ಬಿಟ್ಟು ಸ್ಮೃತಿ ಪಕ್ಕದಲ್ಲಿರಲು ಹೊರಟಿದ್ದಾರೆ. ಯಾವುದೇ ದೊಡ್ಡ ಹೇಳಿಕೆಗಳಿಲ್ಲ, ಕೇವಲ ಶಾಂತ ಒಗ್ಗಟ್ಟು. ನಿಜವಾದ ತಂಡದ ಸದಸ್ಯರು ಇದನ್ನೇ ಮಾಡುತ್ತಾರೆ. ಸರಳ. ನೇರ. ನಿಜವಾದ." ಎಂದು ಬರೆದಿದ್ದಾರೆ.
ಮಹಾರಾಷ್ಟ್ರ ಮೂಲದ ಸ್ಮೃತಿ ಮಂಧಾನ, ಇಂದೋರ್‌ ಮೂಲದ ಪಲಾಶ್ ಮುಚ್ಚಲ್ ಅವರೊಂದಿಗೆ 2019ರಿಂದಲೂ ಡೇಟಿಂಗ್ ಮಾಡುತ್ತಿದ್ದರು. ಕೆಲವು ವರ್ಷಗಳ ಹಿಂದೆ ಇಬ್ಬರೂ ತಮ್ಮ ಸಂಬಂಧವನ್ನು ಅಧಿಕೃತವಾಗಿ ಘೋಷಿಸಿದರು. ಸ್ಮೃತಿ ಅವರು ಟೀಮ್​ ಇಂಡಿಯಾದ ಆರಂಭಿಕ ಆಟಗಾರ್ತಿ ಮತ್ತು ಉಪನಾಯಕಿಯಾಗಿದ್ದರೆ, ಪಲಾಶ್ ಮುಚ್ಚಲ್​ ಬಾಲಿವುಡ್‌ನಲ್ಲಿ ಸಂಗೀತ ನಿರ್ದೇಶಕನಾಗಿದ್ದಾರೆ. ನವೆಂಬರ್ 23 ರಂದು ಮದುವೆ ನಡೆಯಬೇಕಿತ್ತು. ಆದರೆ, ಸಂಜೆಯೊತ್ತಿಗೆ ಇಡೀ ಚಿತ್ರಣವೇ ಬದಲಾಯಿತು. ಮದುವೆಯನ್ನು ಮುಂದೂಡಲಾಗಿದೆ ಎಂಬ ಸುದ್ದಿ ಹೊರಬಿತ್ತು.
ತಂದೆ ಹೃದಯಾಘಾತದಿಂದ ಆಸ್ಪತ್ರೆಗೆ ದಾಖಲಾದ ನಂತರ, ಸ್ಮೃತಿ ಅವರು ತನ್ನ ಮದುವೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲು ಕೇಳಿಕೊಂಡಿದ್ದಾರೆ. ಹೀಗಾಗಿ ಮದುವೆಯನ್ನು ಮುಂದೂಡಲಾಗಿದೆ ಎಂದು ಅವರ ಮ್ಯಾನೇಜರ್ ಬಹಿರಂಗಪಡಿಸಿದ್ದಾರೆ. ಅದಾದ ನಂತರ, ಪಲಾಶ್ ಕೂಡ ಅನಿರೀಕ್ಷಿತವಾಗಿ ಆಸ್ಪತ್ರೆಗೆ ದಾಖಲಾಗಿದರು. ಈ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಪಲಾಶ್ ಅವರು ಮೇರಿ ಡಿ'ಕೋಸ್ಟಾ ಎಂಬ ನೃತ್ಯ ನಿರ್ದೇಶಕಿಯೊಂದಿಗೆ ಸಂಬಂಧ ಹೊಂದಿದ್ದಾರೆ ಎಂದು ಹರಿಬಿಡಲಾಯಿತು. ಅಲ್ಲದೆ, ಪಲಾಶ್​ ಮತ್ತು ಮುಚ್ಚಲ್​ ಚಾಟ್​ ಮಾಡಿದ್ದಾರೆ ಎನ್ನಲಾದ ಸ್ಕ್ರೀನ್‌ಶಾಟ್‌ಗಳನ್ನು ಸಹ ಹರಿಬಿಡಲಾಯಿತು. ಇದರಲ್ಲಿ ಪಲಾಶ್ ಅವರು ಸ್ಮೃತಿಯ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಆಕೆ ತನಗೆ ಸರಿಯಾಗಿ ಟೈಂ ಕೊಡುತ್ತಿಲ್ಲ ಎಂದು ಪಲಾಶ್​ ಹೇಳಿಕೊಂಡಿದ್ದಾರೆ. ಅಲ್ಲದೆ, ತನ್ನೊಂದಿಗೆ ಡೇಟ್​ ಮಾಡುವಂತೆ ಪಲಾಶ್​ ಕೇಳಿಕೊಂಡಿದ್ದಾರೆ. ಆದರೆ, ವೈರಲ್​ ಆಗಿರುವ ಸ್ಕ್ರೀನ್​ಶಾಟ್​ಗಳ ಬಗ್ಗೆ ಯಾವುದೇ ದೃಢೀಕರಣವಿಲ್ಲ. ಅದೊಂದು ವದಂತಿಯಾಗಿದೆ.
ಪಲಾಶ್​ ಬಗ್ಗೆ ತಿಳಿದ ಸ್ಮೃತಿಯ ತಂದೆ ಶ್ರೀನಿವಾಸ್​ ನವೆಂಬರ್​ 22ರ ರಾತ್ರಿಯೇ ಪಲಾಶ್ ಅವರನ್ನು ಎದುರಿಸಿ, ಪ್ರಶ್ನಿಸಿದ್ದಾರೆ ಎನ್ನಲಾಗುತ್ತಿದೆ. ಈ ವೇಳೆ ದೊಡ್ಡದಾಗಿ ಜಗಳ ಜಡೆದಿದೆ. ಎರಡೂ ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಶ್ರೀನಿವಾಸ್​ ಅವರಿಗೆ ಹೃದಯಾಘಾತವಾಗಿದೆ ಎಂದು ಗಾಸಿಪ್ ಹರಡುತ್ತಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net