ತಿನ್ಸುಕಿಯಾದಲ್ಲಿ ಯಶಸ್ವಿ ಕಾರ್ಯಾಚರಣೆ: ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗಿದ್ದ ಇಬ್ಬರು ಉಗ್ರರ ಬಂಧನ: AK-56 ರೈಫಲ್​, ಗ್ರೇನೆಡ್​ ಜಫ್ತಿ! Terrorists Arrested in Tinsukia

ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಇಬ್ಬರು ನಿಷೇಧಿತ ULFA(I) ಉಗ್ರರ ಬಂಧನ
ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಇಬ್ಬರು ನಿಷೇಧಿತ ULFA(I) ಉಗ್ರರ ಬಂಧನ
Published on

ಪ್ರಮುಖ ಮುಖ್ಯಾಂಶಗಳು

  • ಅಸ್ಸಾಂನ ತಿನ್ಸುಕಿಯಾದಲ್ಲಿ ಪೊಲೀಸರು ಮತ್ತು ಕೇಂದ್ರ ತನಿಖಾ ಸಂಸ್ಥೆಗಳ ಜಂಟಿ ಕಾರ್ಯಾಚರಣೆ
  • ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಇಬ್ಬರು ನಿಷೇಧಿತ ULFA(I) ಉಗ್ರರ ಬಂಧನ
  • AK-56 ರೈಫಲ್ ಹಾಗೂ ಸ್ಫೋಟಕಗಳ ಜಪ್ತಿ
ತಿನ್ಸುಕಿಯಾ: ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಜ್ಜಾಗಿದ್ದ ನಿಷೇಧಿತ ಉಗ್ರ ಸಂಘಟನೆ ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ [ULFA(I)] ನ ಇಬ್ಬರು ಭಯೋತ್ಪಾದಕರನ್ನು (Terrorists Arrested in Tinsukia) ಅಸ್ಸಾಂ ಪೊಲೀಸರು ಹಾಗೂ ಕೇಂದ್ರ ತನಿಖಾ ಸಂಸ್ಥೆಯ ಅಧಿಕಾರಿಗಳು ಬಂಧಿಸಿದ್ದಾರೆ.
ಶುಕ್ರವಾರ (ಜೂ.26) ಖಚಿತ ಮಾಹಿತಿ ಮೇರೆಗೆ ನಡೆದ ಈ ಜಂಟಿ ಕಾರ್ಯಾಚರಣೆಯಲ್ಲಿ ಯುಎಲ್​​ಎಫ್​ಎ(ಐ) ಸಂಘಟನೆಗೆ ಸೇರಿದ್ದ ಇಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

ಭಾರಿ ಪ್ರಮಾಣದ ಶಸ್ತ್ರಾಸ್ತ್ರ ವಶ!

ಮಾಹಿತಿ ಪ್ರಕಾರ, ಬಂಧಿತರನ್ನು ಎಸ್ಎಸ್ 2 ನೇ ಲೆಫ್ಟಿನೆಂಟ್ ಸಿಯೋರ್ ಅಸೋಮ್ ಅಲಿಯಾಸ್ ಹುಮೆನ್ಜ್ಯೋತಿ ಬರುವಾ (27)ಮತ್ತು ಎಸ್ಎಸ್ 2 ನೇ ಲೆಫ್ಟಿನೆಂಟ್ ಮನೋಜ್ ಅಸೋಮ್ ಅಲಿಯಾಸ್ ಪಾಪು ಮೋರನ್ (30) ಎಂದು ಗುರುತಿಸಲಾಗಿದ್ದು, ಬಂಧಿತರಿಬ್ಬರು ತಿನ್ಸುಕಿಯಾ ಜಿಲ್ಲೆಯ ಬಾಗ್ಜಾನ್ ನಿವಾಸಿಗಳೆಂದು ತಿಳಿದುಬಂದಿದೆ.
ಬಂಧಿತರಿಂದ ಎರಡು ಎಕೆ-56 ರೈಫಲ್​, 172 ಸುತ್ತು ಗುಂಡುಗಳು, ಎರಡು ಹ್ಯಾಂಡ್​ ಗ್ರೇನೆಡ್​ ಹಾಗೂ ಇತರೆ ಸ್ಫೋಟಕ ಸಾಮಾಗ್ರಿಗಳನ್ನು ಜಫ್ತಿ ಮಾಡಲಾಗಿದೆ. ಇವರು ಅಸ್ಸಾಂನ ತಿನ್ಸುಕಿಯಾ ನಗರದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಮುಂದಾಗಿದ್ದರೆಂದು ಹೇಳಲಾಗುತ್ತಿದೆ.

ಮುಂದುವರಿದ ವಿಚಾರಣೆ

ಬಂಧಿತರನ್ನು ಕೇಂದ್ರ ತನಿಖಾ ಸಂಸ್ಥೆಗಳು ಹಾಗೂ ಅಸ್ಸಾಂ ಪೊಲೀಸರಿಬ್ಬರೂ ವಿಚಾರಣೆ ನಡೆಸುತ್ತಿದ್ದು, ಪ್ರಾಥಮಿಕ ಮಾಹಿತಿ ಪ್ರಕಾರ ಇವರು ಸಾರ್ವಜನಿಕರನ್ನು ಗುರಿಯಾಗಿಸಿ ಭಯೋತ್ಪಾದನಾ ಕೃತ್ಯ ಎಸೆಗಲು ಯೋಜನೆ ರೂಪಿಸುತ್ತಿದ್ದರೆಂದು ತಿಳಿದುಬಂದಿದೆ.
ಯುನೈಟೆಡ್ ಲಿಬರೇಶನ್ ಫ್ರಂಟ್ ಆಫ್ ಅಸೋಮ್ [ULFA(I)] ಸಂಘಟನೆಯನ್ನು ನಿಷೇಧ ಮಾಡಿದ್ದರೂ ಅದರ ಸದಸ್ಯರು ಸಕ್ರೀಯವಾಗಿರುವುದು ಪೊಲೀಸರ ತಲೆಬಿಸಿಯನ್ನು ಹೆಚ್ಚಿಸಿದ್ದು, ಈ ಇಬ್ಬರನ್ನು ಹಿಡಿದುಕೊಂಡು ಇತರ ಸದಸ್ಯರ ಬೇಟೆ ಆರಂಭಿಸುವ ಕುರಿತು ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net