ಓದುವುದರಲ್ಲಿ ನಿಪುಣಳಾಗಿದ್ದ ಪಾರ್ವತಿ, ಅನಿರೀಕ್ಷಿತ ಅಪಘಾತದಿಂದ ಸಂಪೂರ್ಣವಾಗಿ ನಲುಗಿಹೋದಳು. ಆದರೆ, ತನ್ನ ಓದನ್ನು ಬಿಟ್ಟುಕೊಡಲು ಪಾರ್ವತಿ ಸಿದ್ಧಳಿರಲಿಲ್ಲ. ಗಾಯ ವಾಸಿಯಾಗುವ ಮೊದಲೇ, ಆಕೆ ಏಳನೇ ತರಗತಿಯ ವಾರ್ಷಿಕ ಪರೀಕ್ಷೆಗೆ ಹಾಜರಾದಳು. ತನ್ನ ಬಲಗೈ ಕತ್ತರಿಸಿದ್ದರಿಂದ ಸಾಕಷ್ಟು ಕಷ್ಟಪಡಬೇಕಾಯಿತು. ಸುಮಾರು ಒಂದು ವರ್ಷದ ಕಠಿಣ ಪರಿಶ್ರಮ ಹಾಕಿ, ತನ್ನ ಎಡಗೈಯಿಂದ ಬರೆಯಲು ಪ್ರಾರಂಭಿಸಿದಳು. ಒಂಬತ್ತನೇ ತರಗತಿಯಲ್ಲಿ ಹಾಸ್ಟೆಲ್ಗೆ ಸೇರಿದ ನಂತರ, ತನ್ನ ಒಂದು ಕೈಯಿಂದ ತನ್ನ ಸ್ವಂತ ವ್ಯವಹಾರಗಳನ್ನು ನೋಡಿಕೊಳ್ಳಲು ಕಲಿತಳು. ಹತ್ತನೇ ತರಗತಿಯಲ್ಲಿ, ಗಣಿತವನ್ನು ಹೊರತುಪಡಿಸಿ ಎಲ್ಲಾ ವಿಷಯಗಳಲ್ಲಿ ಎ ಪ್ಲಸ್ನೊಂದಿಗೆ ಉತ್ತೀರ್ಣಳಾದಳು. ನಂತರ ಆಕೆ ಅಂಬಲಪುಳ ಮಾಡೆಲ್ ಹೈಯರ್ ಸೆಕೆಂಡರಿ ಶಾಲೆಯಿಂದ ದ್ವಿತೀಯ ಪಿಯುಸಿಯಲ್ಲಿ ಪೂರ್ಣ ಅಂಕಗಳೊಂದಿಗೆ ಉತ್ತೀರ್ಣಳಾದಳು.