ಪೊಲೀಸರ ಮಾಹಿತಿ ಪ್ರಕಾರ, ಮೂಲತಃ ಮಧ್ಯಪ್ರದೇಶದ ಟಕ್ರೌಲಿ ಗ್ರಾಮದ ನಿವಾಸಿ ರಾಹುಲ್, ಧೋಲ್ಪುರದಲ್ಲಿ ತನ್ನ ಸಂಬಂಧಿಕರ ಮನೆಯಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದ. ಗುರುವಾರದಂದು (ಜು.17) ಶಾಲೆಯಲ್ಲಿ ರಾಹುಲ್ ಹಾಗೂ ಆತನ ಸಹಪಾಠಿಯೊಂದಿಗೆ ನಡೆದ ಸಣ್ಣ ಜಗಳ ನಡೆದಿತ್ತು. ಈ ವೇಳೆ ಆ ವಿದ್ಯಾರ್ಥಿನಿ ಆತನ ಚರ್ಮದ ಬಣ್ಣವನ್ನು ಗುರಿಯಾಗಿಸಿಕೊಂಡು ಅತ್ಯಂತ ಅವಹೇಳನಕಾರಿ ಪದ ಬಳಸಿ ನಿಂದಿಸಿದ್ದಳು ಎನ್ನಲಾಗಿದೆ.