ವಿದ್ಯಾರ್ಥಿನಿ ಕೆರೆಯಲ್ಲಿ ಶವವಾಗಿ ಪತ್ತೆ: ಡೆತ್‌ನೋಟ್‌ನಲ್ಲಿ ಅಡಗಿತ್ತು ಸಾವಿನ ಸುಳಿವು! | Death Note

Death Note
Death Note
Published on

ಗುರುಗ್ರಾಮ:ಕಳೆದ ಮೂರು ದಿನಗಳಿಂದ ನಾಪತ್ತೆಯಾಗಿದ್ದ11ನೇ ತರಗತಿಯ ಪ್ರತಿಭಾವಂತ ವಿದ್ಯಾರ್ಥಿನಿಯೊಬ್ಬಳು ಗ್ರಾಮದ ಸ್ಮಶಾನದ ಬಳಿಯ ಕೆರೆಯಲ್ಲಿ ಶವವಾಗಿಪತ್ತೆಯಾಗಿರುವ ದಾರುಣ ಘಟನೆ ಮೊಕಲ್ವಾಸ್ ಗ್ರಾಮದಲ್ಲಿನಡೆದಿದೆ. ಮೇಲ್ನೋಟಕ್ಕೆ ಇದು ಆತ್ಮಹತ್ಯೆ ಎಂದುಪೊಲೀಸರು ಶಂಕಿಸಿದ್ದಾರೆ.

ಫೆಬ್ರವರಿ11 ರಾತ್ರಿ ಊಟದ ನಂತರ ಓದಿಕೊಳ್ಳುವುದಾಗಿಹೇಳಿ ತನ್ನ ಕೋಣೆಗೆ ತೆರಳಿದ್ದಬಾಲಕಿ, ಮರುದಿನ ಬೆಳಿಗ್ಗೆ ನಾಪತ್ತೆಯಾಗಿದ್ದಳು. ಕುಟುಂಬಸ್ಥರು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗದಿದ್ದಾಗಪೊಲೀಸರಿಗೆ ದೂರು ನೀಡಿದ್ದರು. ಬಾಲಕಿಯಪತ್ತೆಗಾಗಿ ಕುಟುಂಬಸ್ಥರು 1 ಲಕ್ಷ ರೂಪಾಯಿ ಬಹುಮಾನವನ್ನೂಘೋಷಿಸಿದ್ದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಬಾಲಕಿಯು ಶಾಲಾ ಸಮವಸ್ತ್ರ ಧರಿಸಿಯೇಮನೆಯಿಂದ ಹೊರಬಂದಿರುವುದು ಕಂಡುಬಂದಿತ್ತು.

ಡೆತ್ನೋಟ್ ನೀಡಿದ ಸುಳಿವು

ಶುಕ್ರವಾರಬಾಲಕಿಯ ಕೋಣೆಯನ್ನು ತಪಾಸಣೆ ನಡೆಸಿದ ಪೊಲೀಸರಿಗೆ ಒಂದು ಡೈರಿ ಸಿಕ್ಕಿದೆ(DeathNote). ಅದರಲ್ಲಿಆಕೆ ಬರೆದಿದ್ದ ಮಾತುಗಳು ಎಲ್ಲರ ಕಣ್ಣಾಲಿಗಳನ್ನು ಒದ್ದೆಯಾಗಿಸಿವೆ."ಅಮ್ಮ ಮತ್ತು ಅಪ್ಪ,ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ನನ್ನ ತಾತನಬಳಿಗೆ ಹೋಗುತ್ತಿದ್ದೇನೆ. ನನ್ನನ್ನು ಹುಡುಕಬೇಡಿ. ಒಂದು ವೇಳೆ ಹುಡುಕಲೇಬೇಕೆಂದರೆ,ಸ್ಮಶಾನದ ಬಳಿಯ ಕೆರೆಯಲ್ಲಿ ಹುಡುಕಿ." ಸುಳಿವು ಸಿಗುತ್ತಿದ್ದಂತೆ ಪೊಲೀಸರು ಮುಳುಗುತಜ್ಞರೊಂದಿಗೆ ಕೆರೆಗೆ ಧಾವಿಸಿದ್ದಾರೆ. ಮೋಟಾರ್ ಮೂಲಕ ಕೆರೆಯ ನೀರನ್ನುಹೊರಹಾಕಿದಾಗ, ಕೆಸರಿನಲ್ಲಿ ಹೂತುಹೋಗಿದ್ದ ಬಾಲಕಿಯ ಶವ ಪತ್ತೆಯಾಗಿದೆ. ಸಾವಿನಸಮಯದಲ್ಲಿ ಆಕೆ ಶಾಲಾ ಸಮವಸ್ತ್ರದಲ್ಲೇಇದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖೆಮುಂದುವರಿಕೆ

ಬಾಲಕಿಯತಂದೆ ನ್ಯಾಯಾಲಯದ ಗ್ರಂಥಾಲಯದಲ್ಲಿ ಕೆಲಸ ಮಾಡುತ್ತಿದ್ದು, ಮಗಳುಓದಿನಲ್ಲಿ ಬಹಳ ಮುಂದಿದ್ದಳು ಎಂದುಕುಟುಂಬದವರು ತಿಳಿಸಿದ್ದಾರೆ. ಶನಿವಾರ ಮರಣೋತ್ತರ ಪರೀಕ್ಷೆಯ ನಂತರ ಶವವನ್ನು ಕುಟುಂಬಕ್ಕೆಹಸ್ತಾಂತರಿಸಲಾಗಿದೆ. ಪ್ರತಿಭಾವಂತ ವಿದ್ಯಾರ್ಥಿನಿ ಇಂತಹ ಕಠಿಣ ನಿರ್ಧಾರತೆಗೆದುಕೊಳ್ಳಲು ಕಾರಣವೇನು ಎಂಬ ಬಗ್ಗೆ ಪೊಲೀಸರುತನಿಖೆ ನಡೆಸುತ್ತಿದ್ದಾರೆ,(ಏಜೆನ್ಸೀಸ್‌).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net