ಬೀದಿ ನಾಯಿ ಕಡಿತದಿಂದ ಸಾವು ಸಂಭವಿಸಿದರೆ ರಾಜ್ಯ ಸರ್ಕಾರವೇ ಹೊಣೆ: ಸುಪ್ರೀಂ ಕೋರ್ಟ್ Dog ​​case

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
ನವದೆಹಲಿ: ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಬೀದಿ ನಾಯಿಗಳ ದಾಳಿಯಿಂದ (Dog ​​case) ಸಂಭವಿಸುತ್ತಿರುವ ಸಾವುಗಳ ಕುರಿತು ಸುಪ್ರೀಂ ಕೋರ್ಟ್​ ಮಂಗಳವಾರ (ಜ.13) ಅತ್ಯಂತ ಕಠಿಣ ನಿಲುವು ತೆಗೆದುಕೊಂಡಿದ್ದು, ನಾಯಿ ಕಡಿತದಿಂದ ಉಂಟಾಗುವ ಪ್ರತಿಯೊಂದು ಸಾವಿಗೂ ಸಂಬಂಧಪಟ್ಟ ರಾಜ್ಯ ಸರ್ಕಾರಕ್ಕೆ ಭಾರೀ ಮೊತ್ತದ ದಂಡವನ್ನು ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದೆ.

ನಾಯಿಗಳಿಗೆ ಆಹಾರ ನೀಡುವವರೇ ನೇರ ಹೊಣೆ: ಸುಪ್ರೀಂ ಕೋರ್ಟ್

ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರ ಪೀಠವು ಈ ಪ್ರಕರಣದ ವಿಚಾರಣೆ ನಡೆಸುತ್ತಾ,  ಯಾರು ಬೀದಿ ನಾಯಿಗಳಿಗೆ ಆಹಾರ ನೀಡುತ್ತಾರೋ, ಆ ನಾಯಿಗಳು ಯಾರನ್ನಾದರೂ ಕಚ್ಚಿದರೆ, ಆ ಘಟನೆಗೆ ಆಹಾರ ನೀಡುವವರೇ ನೇರ ಹೊಣೆಯಾಗುತ್ತಾರೆ ಎಂದು ತಿಳಿಸಿದೆ.

ಎಬಿಸಿ ನಿಯಮಗಳನ್ನು ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರ ವಿಫಲ!

ಎಬಿಸಿ ನಿಯಮಗಳನ್ನು ಜಾರಿಗೆ ತರುವಲ್ಲಿ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಈ ವಿಚಾರದ ಕುರಿತು ನಾವು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಳ್ಳಲಿದ್ದೇವೆ. ಈ ವಿಷಯವು ಶಾಶ್ವತವಾಗಿ ಮುಂದುವರೆದಿದ್ದು, 1950 ರ ದಶಕದಿಂದಲೂ  ಸಂಸತ್ತು ಈ ವಿಚಾರದ ಬಗ್ಗೆ ಉಲ್ಲೇಖಿಸುತ್ತಿದೆ. ಆದರೂ,  ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದಾಗಿ ಈ ಸಮಸ್ಯೆ 1000 ಪಟ್ಟು ಹೆಚ್ಚಾಗಿದೆ. ಹಾಗಾಗಿ ನಾಯಿ ಕಡಿತದಿಂದ ಯಾರಾದರೂ ಮೃತಪಟ್ಟರೆ, ಜವಬ್ದಾರಿಯುತ ಸರ್ಕಾರಕ್ಕೆ ಭಾರೀ ಮೊತ್ತದ ಪರಿಹಾರವನ್ನು ವಿಧಿಸುತ್ತೇವೆ ಎಂದು ಪೀಠವು ತಿಳಿಸಿದೆ.
ನಾವು ರಾಜ್ಯಗಳು ಮತ್ತು ಕೇಂದ್ರದಲ್ಲಿ ಕ್ರಿಯಾ ಯೋಜನೆ ಇದಿಯೇ? ಇಲ್ಲವೋ? ಎಂಬುದನ್ನು ತಿಳಿಯಲು ನಾವು ಅವರೊಂದಿಗೆ ಅರ್ಧ ದಿನವನ್ನು ಕಳೆಯಬೇಕಾಗಿದೆ. ಈ ವೇಳೆ ನಾವು ಶಾಸನ ಬದ್ಧ ನಿಬಂಧನೆಯ ಅನುಷ್ಠಾನವನ್ನು ಬಯಸುತ್ತೇವೆ. ಅದನ್ನು ಮಾಡಲು ನಮಗೆ ಅವಕಾಶ ನೀಡಿ. ಇದು ನ್ಯಾಯಾಲಯದ ವಿಚಾರಣೆಯ ಬದಲು ಸಾರ್ವಜನಿಕ ವೇದಿಕೆಯಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಭಾವನಾತ್ಮಕ ವಿಷಯ ಎಂದ ವಕೀಲರು

ಜನವರಿ 8 ರಂದು ನಡೆದ ಸುಪ್ರೀಂ ಕೋರ್ಟ್ ನ ಅಂತಿಮ ವಿಚಾರಣೆಯಲ್ಲಿ ಎಬಿಸಿ ನಿಯಮಗಳ ಸರಿಯಾದ ಅನುಷ್ಠಾನದ ಕೊರತೆಯನ್ನು ಎತ್ತಿ ತೋರಿಸಿತು. ಈ ವೇಳೆ ವಕೀಲೆ ಮೇನಕಾ ಗುರುಸ್ವಾಮಿ ಬೀದಿ ನಾಯಿಗಳ ಸಮಸ್ಯೆಯನ್ನು ಭಾವನಾತ್ಮಕ ವಿಷಯ ಎಂದು ಕರೆದಿದ್ದರು. ಈ ಹೇಳಿಕೆಗೆ ಅನುಗುಣವಾಗುವಂತೆ ಶ್ವಾನ ಪ್ರಿಯರು ವಾಸ್ತವದಿಂದ ದೂರ ಇರಬೇಕು ಎಂದು ಕೋರ್ಟ್ ತಿಳಿಸಿದೆ.
ಕಳೆದ ವಾರ, ಸುಪ್ರೀಂ ಕೋರ್ಟ್, ನಾಯಿಗಳಿಗೆ ಆಹಾರ ನೀಡುವವರು ಮತ್ತು ಆರೈಕೆ ಮಾಡುವವರಿಗೆ ಆಹಾರ ವಿರೋಧಿ ಜಾಗರೂಕರು ಕಿರುಕುಳ ನೀಡಿದ್ದಾರೆ ಎಂಬ ಆರೋಪಗಳನ್ನು ಪರಿಗಣಿಸುವುದಿಲ್ಲ ಎಂದು ಹೇಳಿತ್ತು. ಏಕೆಂದರೆ, ಇದು ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಯಾಗಿದ್ದು, ಸಂತ್ರಸ್ತರು ಈ ವಿಚಾರದ ಬಗ್ಗೆ ಎಫ್‌ಐಆರ್ ದಾಖಲಿಸಬಹುದು. 
ನಾಯಿ ಪ್ರಿಯರ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲೆ ಮಹಾಲಕ್ಷ್ಮಿ ಪಾವಾನಿ, ಬೀದಿ ನಾಯಿಗಳಿಗೆ ಆಹಾರ ನೀಡುವ ಮಹಿಳೆಯರ ಮತ್ತು ಆರೈಕೆದಾರರ ಶೋಚನೀಯ ಸ್ಥಿತಿಯನ್ನು ಪೀಠಕ್ಕೆ ವಿವರಿಸಿದರು. ಸಮಾಜದಲ್ಲಿ ಕೆಲವು ಆಹಾರ ವಿರೋಧಿ ಜಾಗಣೆದಾರರು ಹುಟ್ಟಿಕೊಂಡಿದ್ದಾರೆ. ಇವರು ಸುಪ್ರೀಂ ಕೋರ್ಟ್‌ನ ಹಳೆಯ ಆದೇಶಗಳನ್ನು ಜಾರಿ ಮಾಡುವ ನೆಪದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net