ಹೆಚ್ಚಾಗಿ ಹಿರಿಯ ನಾಗರಿಕರನ್ನು ಗುರಿಯಾಗಿಸಲಾಗುತ್ತಿದೆ. 78%ರಿಂದ 82% ಸಂತ್ರಸ್ತರು 60 ವರ್ಷ ಮೇಲ್ಪಟ್ಟವರೇ ಆಗಿದ್ದಾರೆ. ಹೊರದೇಶಗಳಿಂದಲೂ ಈ ಜಾಲಗಳು ಕಾರ್ಯನಿರ್ವಹಿಸುತ್ತಿದ್ದು, ತನಿಖೆಗೆ ಇಂಟರ್ಪೋಲ್ ನೆರವು ಪಡೆಯುವಂತೆ ನ್ಯಾಯಾಲಯ ಸೂಚಿಸಿದೆ. ಕಾಂಬೋಡಿಯಾ, ಲಾವೋಸ್ ಸೇರಿ ಹಲವು ದೇಶಗಳಿಂದ ಇಂಥ ಜಾಲಗಳು ಕಾರ್ಯನಿರ್ವಹಿಸುತ್ತಿದ್ದು, ಭಾರತೀಯ ತನಿಖಾ ಸಂಸ್ಥೆಗಳು ಅಲ್ಲಿಯವರೆಗೆ ತಲುಪುವುದು ಮತ್ತು ಆ ದೇಶಗಳಲ್ಲಿ ತನಿಖೆಗೆ ಸಹಕಾರ ಪಡೆಯುವುದು ಸವಾಲಾಗಿ ಪರಿಣಮಿಸಿದೆ.