ಮಹಾರಾಷ್ಟ್ರ ಮೂಲದ ಕಿಶನ್ ಮಾರುತಿ ಸುತಾರ ಎಂಬುವವರು ರೈಲ್ವೆಯಲ್ಲಿ ಗೂಡ್ಸ್ ಟ್ರೈನ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಕೆಲಸದಿಂದ ನಿವೃತ್ತಿ ಪಡೆದ ನಂತರ ಮಲ್ಕಾಜಿಗಿರಿಯ ಕೃಷ್ಣಾನಗರದಲ್ಲಿ ಮನೆ ಖರೀದಿಸಿ, ಪತ್ನಿ ಗಂಗಾಬಾಯಿ, ಮಗ ಕಿಶನ್ (47) ಮತ್ತು ಮಗಳು ಪ್ರಫುಲ್ಲಾ (36) ಅವರೊಂದಿಗೆ ವಾಸವಾಗಿದ್ದರು. ಮಗ ಕಿಶನ್ ಯಾವುದೇ ಕೆಲಸ ಮಾಡದೆ ಮೋಜು ಮಾಡುತ್ತಾ ಹಣಕ್ಕಾಗಿ ತಂದೆಗೆ ಪೀಡಿಸುತ್ತಿದ್ದ. ಇತ್ತ ಮಗಳು ಪ್ರಫುಲ್ಲಾ ಪೋಸ್ಟ್ ಗ್ರಾಜುಯೇಷನ್ (PG) ಮುಗಿಸಿದ್ದರೂ ಕೆಲಸಕ್ಕೆ ಹೋಗದೆ ಮನೆಯಲ್ಲೇ ಖಾಲಿ ಕುಳಿತಿದ್ದಳು. ತಂದೆ ಇವರನ್ನು ಮಂದಲಿಸುತ್ತಿದ್ದರಲ್ಲದೆ, ತನ್ನ ಪೆನ್ಷನ್ ಹಣವನ್ನು ಮಗಳ ಹೆಸರಿಗೆ ವರ್ಗಾಯಿಸಲು ನಿರಾಕರಿಸಿದ್ದರು. ಇದೇ ಕಾರಣಕ್ಕೆ ತಂದೆಯನ್ನು ಮುಗಿಸಲು ಇಡೀ ಕುಟುಂಬ ಸ್ಕೆಚ್ ಹಾಕಿತ್ತು.