Stock Market:ಷೇರುಪೇಟೆ ತೀವ್ರ ಕುಸಿತ: ಒಂದೇ ವಹಿವಾಟಿನಲ್ಲಿ 7 ಲಕ್ಷ ಕೋಟಿ ರೂ.ನಷ್ಟ!

Stock Market
Stock Market
Published on
ಮುಂಬೈ: ದೇಶೀಯ ಷೇರು(Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸೋಮವಾರ(ಡಿ.8) ಭಾರೀ ಕುಸಿದಿದೆ.
ಸೆನ್ಸೆಕ್ಸ್ 610 ಪಾಯಿಂಟ್ ಕುಸಿತ ಕಂಡು 85,102.69ಕ್ಕೆ ತಲುಪಿದರೆ, ನಿಫ್ಟಿ 226 ಪಾಯಿಂಟ್ ಕುಸಿತ ಕಂಡು 25,960.55ಕ್ಕೆ ತಲುಪಿತು. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಕ್ರಮವಾಗಿ 1.73% ಮತ್ತು 2.20% ರಷ್ಟು ಕುಸಿದಿದೆ.
ಬಿಎಸ್‌ಇಯಲ್ಲಿ ಪಟ್ಟಿ ಮಾಡಲಾದ ಕಂಪನಿಗಳ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ವಹಿವಾಟಿನಲ್ಲಿ 471 ಲಕ್ಷ ಕೋಟಿ ರೂ.ಯಿಂದ 463.6 ಲಕ್ಷ ಕೋಟಿಗಳಿಗೆ ಇಳಿದಿದ್ದರಿಂದ, ಒಂದೇ ವಹಿವಾಟಿನಲ್ಲಿ ಹೂಡಿಕೆದಾರರು 7 ಲಕ್ಷ ಕೋಟಿ ರೂ.ಗೂ ಹೆಚ್ಚು ನಷ್ಟ ಅನುಭವಿಸಿದ್ದಾರೆ.

ಷೇರು ಕುಸಿತಕ್ಕೆ ಕಾರಣ..?

"ದೇಶೀಯ ಬೆಳವಣಿಗೆಯ (GDP) ಅಂಕಿ-ಅಂಶಗಳು ಮತ್ತು ಆರ್‌ಬಿಐನ ಇತ್ತೀಚಿನ ದರ ಕಡಿತದ ಹೊರತಾಗಿಯೂ, ಜಾಗತಿಕ ಹಣಕಾಸು ನೀತಿ ಕಳವಳಗಳು, ನಿರಂತರ ಎಫ್‌ಐಐ ಹೊರಹರಿವು ಮತ್ತು ಕರೆನ್ಸಿ ದೌರ್ಬಲ್ಯದಿಂದಾಗಿ ಷೇರುಪೇಟೆ ಕುಸಿದಿದೆ ಎಂದು ತಜ್ಞರು ವಿವರಿಸಿದ್ದಾರೆ,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net