3 ದಿನಗಳ ಬಳಿಕ ಪೇರುಪೇಟೆ ಚೇತರಿಕೆ: ಸೆನ್ಸೆಕ್ಸ್ 427, ನಿಫ್ಟಿ 141 ಅಂಕ ಏರಿಕೆ | Stock Market

Stock Market
Stock Market
Published on
ಮುಂಬೈ: ದೇಶೀಯ ಷೇರು(Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಸತತ ಮೂರು ದಿನಗಳ ಬಳಿಕ ಗುರುವಾರ(ಡಿ.11) ಏರಿಕೆ ಕಂಡಿದೆ.
ಸೆನ್ಸೆಕ್ಸ್ 427 ಪಾಯಿಂಟ್‌ಗಳು ಏರಿಕೆಯಾಗಿ 84,818.13 ಕ್ಕೆ ಮುಕ್ತಾಯವಾಯಿತು. ಇತ್ತ ನಿಫ್ಟಿ 50 141 ಅಂಕಗಳು ಏರಿಕೆಯಾಗಿ 25,898.55 ಕ್ಕೆ ತಲುಪಿದೆ. ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಸಹ ಕ್ರಮವಾಗಿ 0.79% ಮತ್ತು 0.51% ರಷ್ಟು ಏರಿಕೆಯಾಗಿ ಮಾರುಕಟ್ಟೆಯು ವ್ಯಾಪಕ ಲಾಭವನ್ನು ಕಂಡಿತು.
ಬಿಎಸ್‌ಇ (ಬಾಂಬೆ ಸ್ಟಾಕ್​ ಎಕ್ಸ್​ಚೆಂಚ್​) ಪಟ್ಟಿಯಲ್ಲಿನ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳೀಕರಣವು ಹಿಂದಿನ ವಹಿವಾಟಿನಲ್ಲಿ 464 ಲಕ್ಷ ಕೋಟಿ ರೂಗಳಿಂದ 466.6 ಲಕ್ಷ ಕೋಟಿ ರೂಗಳಿಗೆ ಏರಿಕೆಯಾಗಿದೆ. ಹೂಡಿಕೆದಾರರು ಒಂದೇ ವಹಿವಾಟಿನಲ್ಲಿ ಸುಮಾರು 2.6 ಲಕ್ಷ ಕೋಟಿ ರೂ ಗಳಿಸಿದರು,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net