ಗುರುವಾರ ಮುಂಜಾನೆ ಸೆನ್ಸೆಕ್ಸ್ ಸುಮಾರು 1,000 ಪಾಯಿಂಟ್‌ಗಳಷ್ಟು (ಶೇ. 1.3) ಭಾರಿ ಕುಸಿತ ಕಂಡಿದೆ. ಇತ್ತ ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ-50 ಸಹ 300 ಪಾಯಿಂಟ್‌ಗಳಿಗಿಂತ ಹೆಚ್ಚು ಇಳಿಕೆಯಾಗಿದ್ದು, 23,550 ಮಟ್ಟಕ್ಕೆ ತಲುಪಿದೆ. ಈ ವಾರವೊಂದರಲ್ಲೇ ಸೆನ್ಸೆಕ್ಸ್ 3,000 ಪಾಯಿಂಟ್‌ಗಳಿಗಿಂತ ಹೆಚ್ಚು ಅಂದರೆ ಶೇಕಡಾ 4 ರಷ್ಟು ಕುಸಿದಿದೆ.