

ಪ್ರಮುಖ ಮುಖ್ಯಾಂಶಗಳು
ಬೆಂಗಳೂರಿನಲ್ಲಿ ದರ: ಬೆಂಗಳೂರಿನಲ್ಲಿ ಮಂಗಳವಾರ 22 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ 12,860 ರೂ. ಇತ್ತು. 24 ಕ್ಯಾರೆಟ್ನ 1 ಗ್ರಾಂ ಚಿನ್ನದ ಬೆಲೆ 14,028 ರೂ. ಇತ್ತು. ಬೆಳ್ಳಿಯ ಬೆಲೆ ಪ್ರತಿ ಕೆಜಿಗೆ 2,44,300 ರೂ. ಇತ್ತು.
ವರ್ಷಾಂತ್ಯದ ಮಂದಗತಿ ವಹಿವಾಟು ಮತ್ತು ವಿದೇಶಿ ಹೂಡಿಕೆದಾರರ ನಿರಂತರ ಹೂಡಿಕೆ ಹಿಂತೆಗೆತದ ಹಿನ್ನೆಲೆಯಲ್ಲಿ ಮಂಗಳವಾರ ಷೇರು ಮಾರುಕಟ್ಟೆ ಅಲ್ಪ ಕುಸಿತ ಕಂಡಿದೆ. ಸೆನ್ಸೆಕ್ಸ್ 20.46 ಅಂಕ ಇಳಿಕೆಯಾಗಿ 84,675.08ಕ್ಕೆ ತಲುಪಿದರೆ, ನಿಫ್ಟಿ 3.25 ಅಂಕ ಕುಸಿದು 25,938.85ಕ್ಕೆ ಸ್ಥಿರವಾಯಿತು.
ಸತತ ಐದನೇ ದಿನವೂ ಮಾರುಕಟ್ಟೆ ಇಳಿಮುಖವಾಗಿದೆ. ಸೋಮವಾರ ವಿದೇಶಿ ಹೂಡಿಕೆದಾರರು 2,759.89 ಕೋಟಿ ರೂ. ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕ್ರೂಡ್ ಬೆಲೆ ಪ್ರತಿ ಬ್ಯಾರೆಲ್ಗೆ 62.23 ಡಾಲರ್ಗೆ ಏರಿಕೆಯಾಗಿದೆ. ಈ ಕ್ಯಾಲೆಂಡರ್ ವರ್ಷದಲ್ಲಿ ಸೆನ್ಸೆಕ್ಸ್ನಲ್ಲಿ ಶೇ. 8ಕ್ಕೂ ಹೆಚ್ಚು ಏರಿಕೆಯಾಗಿದ್ದು ಹೂಡಿಕೆದಾರರ ಸಂಪತ್ತು 30.20 ಲಕ್ಷ ಕೋಟಿ ರೂ.ನಷ್ಟು ಹೆಚ್ಚಳವಾಗಿದೆ.