ಷೇರು ಪೇಟೆ ಇಳಿಕೆ

Stock market decline
Stock market decline
Published on
ಮುಂಬೈ: ಭಾರತದ ವಿರುದ್ಧ ಸುಂಕವನ್ನು ಇನ್ನಷ್ಟು ಹೆಚ್ಚಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಹೊಸ ಎಚ್ಚರಿಕೆಯ ನಡುವೆ ಸೋಮವಾರ ಷೇರು ಮಾರುಕಟ್ಟೆ ಇಳಿಕೆಯಾಗಿದೆ.
ದಿನದ ವಹಿವಾಟಿನ ಮಧ್ಯೆ 446.68 ಅಂಕ ಕುಸಿದು 85,315.33 ತಲುಪಿದ್ದ ಸೆನ್ಸೆಕ್ಸ್, ಕೊನೆಯಲ್ಲಿ 322.39 ಅಂಕ ಕುಸಿದು 85,439.62ಕ್ಕೆ ಸ್ಥಿರವಾಯಿತು. ನಿಫ್ಟಿ ದಿನದ ವಹಿವಾಟಿನಲ್ಲಿ 26,373.20ರ ದಾಖಲೆಯ ಗರಿಷ್ಠ ಮಟ್ಟ ತಲುಪಿದ ನಂತರ ಆ ವೇಗ ಉಳಿಸಿಕೊಳ್ಳುವಲ್ಲಿ ವಿಫಲವಾಯಿತು. ಕೊನೆಯಲ್ಲಿ 78.25 ಅಂಕ ಇಳಿಕೆಯಾಗಿ 26,250.30ಕ್ಕೆ ತಲುಪಿತು. ಶುಕ್ರವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 289.80 ಕೋಟಿ ರೂ. ಮತ್ತು ದೇಶೀಯ ಸಾಂಸ್ಥಿಕ ಹೂಡಿಕೆದಾರರು 677.38 ಕೋಟಿ ರೂ. ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕ್ರೂಡ್ ಶೇ. 0.13ರಷ್ಟು ಕುಸಿದು ಪ್ರತಿ ಬ್ಯಾರೆಲ್ಗೆ 60.67 ಡಾಲರ್ಗೆ ತಲುಪಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net