ಮಾರುಕಟ್ಟೆಯಲ್ಲಿ ಕರಡಿ ಅಬ್ಬರ: 700 ಅಂಕ ಕುಸಿದ ಸೆನ್ಸೆಕ್ಸ್, ಕಂಗಾಲಾದ ಹೂಡಿಕೆದಾರರು! | Stock Market Crash

Stock Market Crash
Stock Market Crash
Published on

ಬೆಂಗಳೂರು: ಕಳೆದಮೂರು ದಿನಗಳಿಂದ ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡಿಸಿದ್ದ ಷೇರು ಮಾರುಕಟ್ಟೆಯು ಇಂದು (ಫೆಬ್ರವರಿ19) ಭಾರಿ ಮಾರಾಟದ ಒತ್ತಡಕ್ಕೆ ಸಿಲುಕಿದೆ(Stock Market Crash).

ಹೌದು, ವಹಿವಾಟಿನ ಆರಂಭದಲ್ಲೇ ಬಿಎಸ್‌ಇ ಸೆನ್ಸೆಕ್ಸ್ 700ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡರೆ, ಎನ್‌ಎಸ್‌ಇನಿಫ್ಟಿ 25,600ರ ಮಹತ್ವದ ಗಡಿಯಿಂದ ಕೆಳಕ್ಕೆ ಜಾರಿದೆ. ಇದರಿಂದಾಗಿ ಹೂಡಿಕೆದಾರರ ಲಕ್ಷಾಂತರ ಕೋಟಿರೂಪಾಯಿ ಸಂಪತ್ತು ಕೇವಲ ಒಂದು ದಿನದಲ್ಲಿ ಕರಗಿದೆ.

ಮಾರುಕಟ್ಟೆಯಸ್ಥಿತಿಗತಿ ಹೇಗಿದೆ?

ಸೆನ್ಸೆಕ್ಸ್ಪತನ: ದಿನದ ವಹಿವಾಟು ಆರಂಭದಲ್ಲಿ ಅಲ್ಪ ಏರಿಕೆ ಕಂಡಿದ್ದರೂ, ಮಧ್ಯಾಹ್ನದ ವೇಳೆಗೆ ಭಾರಿ ಮಾರಾಟ ಕಂಡುಬಂತು.ಸೆನ್ಸೆಕ್ಸ್ ಸುಮಾರು 700 ಅಂಕಗಳ ಕುಸಿತದೊಂದಿಗೆ 83,000 ಮಟ್ಟದತ್ತ ಮುಖ ಮಾಡಿದೆ.

ನಿಫ್ಟಿ ಇಳಿಕೆ:ನಿಫ್ಟಿ 50 ಸೂಚ್ಯಂಕವು 150ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡು 25,600ಕ್ಕಿಂತ ಕೆಳಕ್ಕೆ ಇಳಿದಿದೆ.

ಭಯದ ಸೂಚ್ಯಂಕ(VIX): ಮಾರುಕಟ್ಟೆಯ ಅಸ್ಥಿರತೆಯನ್ನು ಅಳೆಯುವ 'ಇಂಡಿಯಾ ವಿಐಎಕ್ಸ್' (India VIX) ಏಕಾಏಕಿ ಶೇ.9ರಷ್ಟು ಜಿಗಿತ ಕಂಡಿದ್ದು, ಹೂಡಿಕೆದಾರರಲ್ಲಿ ಆತಂಕದ ಛಾಯೆ ಆವರಿಸಿದೆ.

ಕುಸಿತಕ್ಕೆಪ್ರಮುಖ ಕಾರಣಗಳು!

ಜಾಗತಿಕ ಅನಿಶ್ಚಿತತೆ: ಅಮೆರಿಕದ ಫೆಡರಲ್ ರಿಸರ್ವ್‌ನ ಬಡ್ಡಿ ದರ ನಿರ್ಧಾರದವಿಳಂಬ ಮತ್ತು ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನತೆಯು ಜಾಗತಿಕ ಮಾರುಕಟ್ಟೆಗಳಲ್ಲಿ ಕಂಪನ ಸೃಷ್ಟಿಸಿದೆ.

ಐಟಿ ವಲಯದಮೇಲೆ 'ಎಐ' ಭೀತಿ: ಭಾರತೀಯಐಟಿ ಕಂಪನಿಗಳ ಮೇಲೆ ಕೃತಕ ಬುದ್ಧಿಮತ್ತೆ (AI) ಉಂಟುಮಾಡಬಹುದಾದ ಪರಿಣಾಮಗಳ ಕುರಿತಾದ ವರದಿಗಳು ಇನ್ಫೋಸಿಸ್,ಟಿಸಿಎಸ್‌ನಂತಹ ದೈತ್ಯ ಕಂಪನಿಗಳ ಷೇರು ಕುಸಿತಕ್ಕೆ ಕಾರಣವಾಗಿವೆ.

ಇಂದಿನ ಮಾರುಕಟ್ಟೆಯಲ್ಲಿಬ್ಯಾಂಕಿಂಗ್, ಐಟಿ, ರಿಯಾಲ್ಟಿ ಮತ್ತು ಆಟೋಮೊಬೈಲ್ ವಲಯದ ಷೇರುಗಳು ಅತಿ ಹೆಚ್ಚು ಹಾನಿಗೊಳಗಾಗಿವೆ.ಅದಾಗ್ಯೂ, ಕೆಲವು ಸಾರ್ವಜನಿಕ ವಲಯದ ಕಂಪನಿಗಳು (PSU) ಮತ್ತು ಲೋಹದ ಷೇರುಗಳು ಮಾತ್ರ ಅಲ್ಪ ಚೇತರಿಕೆಕಂಡಿವೆ,(ಏಜೆನ್ಸೀಸ್‌).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net