ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಕಾಲ್ತುಳಿತ ಭೀತಿ: 120ಕ್ಕೂ ಅಧಿಕ ಭಕ್ತಾಧಿಗಳು ಆಸ್ಪತ್ರೆಗೆ ದಾಖಲು! Puri Jagannath

ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ ಪರಿಸ್ಥಿತಿ
ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ ಪರಿಸ್ಥಿತಿ
Published on

ಪ್ರಮುಖ ಮುಖ್ಯಾಂಶಗಳು

  • ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ ಪರಿಸ್ಥಿತಿ
  • 120ಕ್ಕೂ ಹೆಚ್ಚು ಭಕ್ತಾಧಿಗಳು ಆಸ್ಪತ್ರೆಗೆ ದಾಖಲು
Puri Jagannath: ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ ಪರಿಸ್ಥಿತಿ ಉಂಟಾಗಿ, 120ಕ್ಕೂ ಹೆಚ್ಚು ಭಕ್ತಾಧಿಗಳು ಆಸ್ಪತ್ರೆಗೆ ದಾಖಲಾದ ಬಗ್ಗೆ ಸ್ಥಳೀಯ ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.
ರಥಯಾತ್ರೆಯ ಸಮಯದಲ್ಲಿ ಒಡಿಶಾದ ಪುರಿಯ ಬಡಾ ದಂಡಯಲ್ಲಿ ಕಾಲ್ತುಳಿತದಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತು. ಈ ವೇಳೆ, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ದರ್ಶನ ಪಡೆಯಲು ಮತ್ತು ರಥ ಎಳೆಯಲು ಮುಗಿಬಿದ್ದ ಹಿನ್ನೆಲೆ ಹಲವರಿಗೆ ಉಸಿರಾಡಲು ತೊಂದರೆಯಾಗಿ ಸುಮಾರು 120ಕ್ಕೂ ಹೆಚ್ಚು ಜನರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಶೇಷ ರಕ್ಷಣಾ ಘಟಕ (SRU) ತಂಡಗಳು ಸ್ಥಳಕ್ಕೆ ಧಾವಿಸಿ, ಉಸಿರಾಡಲು ಮತ್ತು ಮುಂದೆ ಸಾಗಲು ಪರದಾಡುತ್ತಿದ್ದ ಭಕ್ತರನ್ನು ತಕ್ಷಣವೇ ಚಿಕಿತ್ಸೆಗೆ ಪುರಿ ವೈದ್ಯಕೀಯ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ದುರ್ಘಟನೆಯಲ್ಲಿ ಒಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.ಆದರೆ, ವರದಿಯನ್ನು ಸಲ್ಲಿಸುವ ಸಮಯದಲ್ಲಿ ಅಧಿಕಾರಿಗಳಿಂದ ಸಾವಿನ ಕುರಿತಾಗಿ ಯಾವುದೇ ಅಧಿಕೃತ ದೃಢೀಕರಣ ಇನ್ನೂ ಹೊರಬಿದ್ದಿಲ್ಲ.

ರಕ್ಷಣಾ ಪಡೆ ಹರಸಾಹಸ

ಸ್ಥಳದಲ್ಲಿ ಭಕ್ತರ ಮೇಲೆ ಹದ್ದಿನ ಕಣ್ಣಿಟ್ಟಿರುವ ಪೊಲೀಸರು ಮತ್ತು ರಕ್ಷಣಾ ಪಡೆಗಳು, ನೂಕು ನುಗ್ಗಲು ಆಗದಂತೆ ನೋಡಿಕೊಳ್ಳುವತ್ತ ಶ್ರಮಿಸುತ್ತಿದ್ದಾರೆ. ಅಸ್ವಸ್ಥಗೊಂಡ ಜನರನ್ನು ತಕ್ಷಣವೇ ಆಂಬುಲೆನ್ಸ್​ ಸಹಾಯದಿಂದ ಆಸ್ಪತ್ರೆಗಳಿಗೆ ಸೇರಿಸಿ, ಅಗತ್ಯ ಚಿಕಿತ್ಸೆ ಕೊಡಿಸಲಾಗುತ್ತಿದೆ,(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net