ಆದರೆ, ಇಂದು ನಡೆದ ಮಹತ್ವದ ಬೆಳವಣಿಗೆಯಲ್ಲಿ ಎಡಪಕ್ಷಗಳು (CPI & CPI-M), ವಿಸಿಇಕೆ (VCK) ಮತ್ತು ಐಯುಎಂಎಲ್ (IUML) ಪಕ್ಷಗಳು ವಿಜಯ್ ಅವರಿಗೆ ಬೆಂಬಲ ಘೋಷಿಸಿವೆ. ಈ ನಾಲ್ಕು ಪಕ್ಷಗಳು ತಲಾ 2 ಶಾಸಕರನ್ನು ಹೊಂದಿದ್ದು, ಒಟ್ಟು 8 ಶಾಸಕರ ಬಲ ವಿಜಯ್ ಅವರ ಪಾಲಾಗಿದೆ. ಇದರೊಂದಿಗೆ ವಿಜಯ್ ಮೈತ್ರಿಕೂಟದ ಒಟ್ಟು ಬಲ 120ಕ್ಕೆ ಏರಿಕೆಯಾಗಿದ್ದು, ಬಹುಮತದ ಹಾದಿ ಸುಗಮವಾಗಿದೆ.