ತಮಿಳುನಾಡಿನ ಒಂಬತ್ತು ಮೀನುಗಾರರನ್ನ ಬಂಧಿಸಿದ ಶ್ರೀಲಂಕಾ ನೌಕಾಪಡೆ; ಜೈಶಂಕರ್​ಗೆ ಪತ್ರ ಬರೆದ ಸಿಎಂ ವಿಜಯ್ | CM Vijay writes

ಸಿಎಂ ವಿಜಯ್
ಸಿಎಂ ವಿಜಯ್
Published on
ಚೆನ್ನೈ: ತಲೈಮನ್ನಾರ್ ಬಳಿಯ ತನ್ನ ಜಲಪ್ರದೇಶದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಶ್ರೀಲಂಕಾ ನೌಕಾಪಡೆ ಬುಧವಾರ ರಾತ್ರಿ ಒಂಬತ್ತು ತಮಿಳುನಾಡು ಮೀನುಗಾರರನ್ನು ಬಂಧಿಸಿ, ಒಂದು ಟ್ರಾಲರ್ ಅನ್ನು ವಶಪಡಿಸಿಕೊಂಡಿದೆ ಎಂದು ವರದಿಯಾಗಿದ್ದು, ಅವರನ್ನು ಬಿಡಿಸಲು ಮಧ್ಯಪ್ರವೇಶಿಸುವಂತೆ ಕೋರಿ ಸಿಎಂ ವಿಜಯ್(CM Vijay writes) ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್​ಗೆ ಪತ್ರ ಬರೆದಿದ್ದಾರೆ.
ಬಂಧಿತ ಮೀನುಗಾರರು ರಾಮೇಶ್ವರಂ ಮೂಲದ ಜೆ ಜೊನಾಥನ್, ಎ ಅಂತೋನಿ ಪಿಚ್ಚೈ, ಕೆ ವೆಳ್ಳೈಸಾಮಿ, ಪಂಬನ್‌ನ ಎಂ ಪ್ರಭು, ವಿ ಆರೋಗ್ಯದೇವಿನ್, ಪಿ ಆರೋಗ್ಯಜನಿಸ್ತಾನ್, ಪಿ ಸ್ಟೀಫನ್, ತಂಗಚಿಮಡಂನ ಎಂ ಡಾನ್ಬೋಸ್ಕೋ ಹಾಗೂ ವಿರುದುನಗರದ ಕೆ ಸುಬ್ಬಯ್ಯ. ಶ್ರೀಲಂಕಾ ಪೊಲೀಸರು 9 ಮಂದಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ. ಬಳಿಕ ನ್ಯಾಯಾಲಯವು ಅವರನ್ನು ಆಗಸ್ಟ್25 ರವರೆಗೆ ರಿಮಾಂಡ್ ನೀಡಿದೆ.
ಈ ಕುರಿತು ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರಿಗೆ ಸಿಎಂ ವಿಜಯ್ ಪತ್ರ ಬರೆದಿದ್ದು, ಆಗಸ್ಟ್‌ನಲ್ಲಿ ವರದಿಯಾದ ಎರಡನೇ ಘಟನೆ ಇದು. ಭಾರತೀಯ ಮೀನುಗಾರರ ಪುನರಾವರ್ತಿತ ಬಂಧನಗಳು ಮೀನುಗಾರ ಸಮುದಾಯದಲ್ಲಿ, ವಿಶೇಷವಾಗಿ ತಮಿಳುನಾಡಿನ ಕರಾವಳಿ ಜಿಲ್ಲೆಗಳಲ್ಲಿ ಗಣನೀಯ ಆತಂಕ ಮತ್ತು ಆಳವಾದ ಅಭದ್ರತೆಯ ಭಾವನೆಯನ್ನು ಉಂಟುಮಾಡುತ್ತಿವೆ.
ಇಲ್ಲಿಯವರೆಗೆ 49 ಭಾರತೀಯ ಮೀನುಗಾರರು ಶ್ರೀಲಂಕಾದ ವಶದಲ್ಲಿದ್ದಾರೆ. ಮಧ್ಯಪ್ರವೇಶಿಸಿ ರಾಜತಾಂತ್ರಿಕ ಮಾತುಕತೆ ಮೂಲಕ ಮೀನುಗಾರರನ್ನು ಬಿಡುಗಡೆ ಮಾಡಿಸುವಂತೆ ಮನವಿ ಮಾಡಿದ್ದಾರೆ. ಇನ್ನೂ ಮುಂದಿನ ವಾರಗಳಲ್ಲಿ ಈ ಕುರಿತು ಸಿಎಂ ವಿಜಯ್ ಜೈಶಂಕರ್ ಸೇರಿದಂತೆ ಕೇಂದ್ರ ಸಚಿವರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net