ಡಾ. ಬಿ.ಆರ್. ಅಂಬೇಡ್ಕರ್ ಮತ್ತು ಮಹಾತ್ಮ ಗಾಂಧೀಜಿಯವರನ್ನು ಈ ವೇಳೆ ಸ್ಮರಿಸಿದ ಸಿಎಂ, ಅವರಿಬ್ಬರೂ ಪತ್ರಕರ್ತರಾಗಿ ಧ್ವನಿ ಇಲ್ಲದವರ ಧ್ವನಿಯಾಗಿದ್ದರು. ಬಸವಾದಿ ಶರಣರು ಕೂಡ ಸಮಾಜದ ನ್ಯೂನ್ಯತೆಗಳನ್ನು ಹೋಗಲಾಡಿಸಿ ಸಮಸಮಾಜ ಕಟ್ಟುವ ಕಾಯಕ ಮಾಡಿದ್ದರು. ಸಮಾಜದಲ್ಲಿ ಅಸಮಾನತೆ ಮುಂದುವರಿಯುವುದು ಪಟ್ಟಭದ್ರ ಹಿತಾಸಕ್ತಿಗಳ ಗುರಿಯಾಗಿದ್ದು, ಆದರೆ ಪತ್ರಕರ್ತರು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕು. ಯಾವ ದೇವರೂ ಯಾರನ್ನೂ ಅವಿದ್ಯಾವಂತನಾಗು ಅಥವಾ ಕೆಳಜಾತಿಯಲ್ಲಿ ಹುಟ್ಟು ಎಂದು ಬಯಸುವುದಿಲ್ಲ ಎಂಬ ಸತ್ಯವನ್ನು ಪತ್ರಕರ್ತರು ಜನರಿಗೆ ತಲುಪಿಸಬೇಕು ಎಂದು ತಿಳಿಸಿದರು.