ಸುನಿತಾ ಅವರು ಒಟ್ಟು 9 ಬಾರಿ ಬಾಹ್ಯಾಕಾಶ ನಡಿಗೆ ನಡೆಸಿದ್ದು, ಒಟ್ಟು 62 ಗಂಟೆ 6 ನಿಮಿಷಗಳ ಕಾಲ ನಿರಂತರವಾಗಿ ಕೆಲಸ ಮಾಡಿದ್ದಾರೆ. ಇದು ಮಹಿಳಾ ಗಗನಯಾತ್ರಿಯೊಬ್ಬರ ಗರಿಷ್ಠ ಸಾಧನೆಯಾಗಿದೆ. ಬಾಹ್ಯಾಕಾಶದಲ್ಲೇ ಮ್ಯಾರಥಾನ್ ಓಡಿದ ವಿಶ್ವದ ಮೊದಲ ವ್ಯಕ್ತಿ ಎಂಬ ದಾಖಲೆ ಇವರ ಹೆಸರಿನಲ್ಲಿದೆ.2006ರಲ್ಲಿ ಮೊದಲ ಬಾರಿಗೆ ಡಿಸ್ಕವರಿ ನೌಕೆಯಲ್ಲಿ ಹಾರಾಟ ನಡೆಸಿದ್ದ ಅವರು, ನಂತರ 2012 ಮತ್ತು 2024ರಲ್ಲಿ ಐತಿಹಾಸಿಕ ಮಿಷನ್‌ಗಳ ಭಾಗವಾಗಿದ್ದರು.