ನನ್ನನ್ನು ಕ್ಷಮಿಸು ಅಮ್ಮ!... ತಾಯಿಗೆ ಭಾವನಾತ್ಮಕ ವಿಡಿಯೋ ಸಂದೇಶ ಕಳುಹಿಸಿ ಸಾವಿಗೆ ಶರಣಾದ ನೀಟ್ ಆಕಾಂಕ್ಷಿ.. Hingoli NEET Student Case

Hingoli NEET Student Case (ಚಿತ್ರ X)
Hingoli NEET Student Case (ಚಿತ್ರ X)
Published on

ಪ್ರಮುಖ ಮುಖ್ಯಾಂಶಗಳು

  • ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಆಕಾಂಕ್ಷಿಯಾಗಿದ್ದ 18 ವರ್ಷದ ವಿದ್ಯಾರ್ಥಿ ಸಾವು
  • ಮೇ 5 ರಂದು ನಡೆದಿದ್ದ ಮೂಲ ನೀಟ್ ಪರೀಕ್ಷೆಯನ್ನು ಬರೆದಿದ್ದ ವಿದ್ಯಾರ್ಥಿ ಸುಶೀಲ್ ಧಗೆ
  • ಸುಶೀಲ್ ಸಾಯುವ ಮುನ್ನ ತನ್ನ ಮೊಬೈಲ್​ ಫೋನ್​ನಲ್ಲಿ 33 ಸೆಕೆಂಡುಗಳ ವಿಡಿಯೋವೊಂದನ್ನು ರೆಕಾರ್ಡ್ ಮಾಡಿದ್ದರು
  • ಅಮ್ಮಾ, ನಾನಿಂದು ನನ್ನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದೇನೆ, ದಯವಿಟ್ಟು ಚಿಂತಿಸಬೇಡಿ
ಮಹಾರಾಷ್ಟ್ರ: ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನೀಟ್ ಆಕಾಂಕ್ಷಿಯಾಗಿದ್ದ 18 ವರ್ಷದ ವಿದ್ಯಾರ್ಥಿಯೊಬ್ಬ ತನ್ನ ತಾಯಿಗೆ ಭಾವನಾತ್ಮಕ ವಿಡಿಯೋ ಸಂದೇಶವನ್ನು ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಹಾರಾಷ್ಟ್ರದ ಹಿಂಗೋಲಿ (Hingoli NEET Student Case) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.

ಘಟನೆಯ ಹಿನ್ನೆಲೆ

ಸುಶೀಲ್ ಧಗೆ ಹಿಂಗೋಲಿ ಜಿಲ್ಲೆಯ ಕಲಮ್ನುರಿ ತಾಲೂಕಿನ ನಿವಾಸಿಯಾಗಿದ್ದು, ವೈದ್ಯಕೀಯ ಶಿಕ್ಷಣ ಪಡೆಯುವ ದೊಡ್ಡ ಕನಸನ್ನು ಹೊಂದಿದ್ದನು. ಮೇ 5 ರಂದು ನಡೆದಿದ್ದ ಮೂಲ ನೀಟ್ ಪರೀಕ್ಷೆಯನ್ನು ಸಹ ಅವರು ಬರೆದಿದ್ದರು. ಆದರೆ, ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಅಕ್ರಮಗಳ ಆರೋಪದ ಹಿನ್ನೆಲೆಯಲ್ಲಿ, ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಕೆಲವು ವಿದ್ಯಾರ್ಥಿಗಳಿಗೆ ಜೂನ್ 21 ರಂದು ಮರುಪರೀಕ್ಷೆಯನ್ನು ಆಯೋಜಿಸಿತ್ತು. ಅದರಲ್ಲಿ ಸುಶೀಲ್ ಕೂಡಾ ಮರುಪರೀಕ್ಷೆಗೆ ಹಾಜರಾಗಿದ್ದರು ಎನ್ನಲಾಗಿದೆ.
ವರದಿಗಳ ಪ್ರಕಾರ, ಸುಶೀಲ್ ಸಾಯುವ ಮುನ್ನ ತನ್ನ ಮೊಬೈಲ್​ ಫೋನ್​ನಲ್ಲಿ 33 ಸೆಕೆಂಡುಗಳ ವಿಡಿಯೋವೊಂದನ್ನು ರೆಕಾರ್ಡ್​ ಮಾಡಿಕೊಂಡಿದ್ದು, ಅದರಲ್ಲಿ ತನ್ನ ಕೈಗಳನ್ನು ಮಡಚಿ, ಅವರ ತಾಯಿಗೆ ಕ್ಷಮೆಯಾಚಿಸುತ್ತಾ ನಾನು ತೀವ್ರ ನೋವಿನಿಂದ ಬಳಲುತ್ತಿರುವುದಾಗಿ ಹೇಳಿಕೊಂಡಿದ್ದಾರೆ.

ವಿಡಿಯೋದಲ್ಲಿ ಹೇಳಿದ್ದೇನು?

ಅಮ್ಮಾ, ನಾನಿಂದು ನನ್ನ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದೇನೆ, ದಯವಿಟ್ಟು ಚಿಂತಿಸಬೇಡಿ. ಮುಂದಿನ ಜನ್ಮದಲ್ಲಿ ನಾನು ಮತ್ತೆ ನಿನ್ನ ಗರ್ಭದಲ್ಲೇ ಹುಟ್ಟುತ್ತೇನೆ. ಮತ್ತೆ ನಿನಗೆ ಈ ರೀತಿಯ ನೋವನ್ನು ಉಂಟುಮಾಡುವುದಿಲ್ಲ. ನನ್ನನ್ನು ಕ್ಷಮಿಸು ಅಮ್ಮ. ಸುಮೇಧ್ ಜೊತೆ ಇರು ಅಮ್ಮ. ನಿಮ್ಮ ಆರೋಗ್ಯವನ್ನು ಚೆನ್ನಾಗಿ ನೋಡಿಕೊಳ್ಳಿ ಮತ್ತು ನನ್ನ ಬಗ್ಗೆ ಚಿಂತಿಸಬೇಡ. ನನಗೆ ತೀವ್ರ ನೋವಾಗಿದೆ... ನನಗೆ ಏನೂ ಮಾಡಲು ಸಾಧ್ಯವಿಲ್ಲ... ನನಗೆ ಇನ್ನು ಏನೂ ಅರ್ಥವಾಗುತ್ತಿಲ್ಲ. ನನ್ನನ್ನು ಕ್ಷಮಿಸು ಅಮ್ಮ... ಎಂದು ವಿಡಿಯೋದಲ್ಲಿ ಹೇಳಿದ್ದಾರೆ.
ಪೊಲೀಸರಿಗೆ ನೀಡಿದ ದೂರಿನಲ್ಲಿ ಸುಶೀಲ್ ಅವರ ಕುಟುಂಬಸ್ಥರು ಪ್ರಮುಖ ಮಾಹಿತಿಗಳನ್ನು ಹಂಚಿಕೊಂಡಿದ್ದು, ಜೂನ್ 21 ರಂದು ನಡೆದ ನೀಟ್ ಮರು ಪರೀಕ್ಷೆಯು ಅತ್ಯಂತ "ಕಷ್ಟಕರ" ಆಗಿತ್ತು ಎಂದು ಸುಶೀಲ್ ಭಾವಿಸಿದ್ದನು ಮತ್ತು ಇದರಿಂದ ಆತ ತೀವ್ರ ಹತಾಶೆಗೆ ಒಳಗಾಗಿದ್ದನು ಎಂದು ತಿಳಿಸಿದ್ದಾರೆ.
ನೀಟ್ (ಯುಜಿ) ಪರೀಕ್ಷೆಯು ದೇಶದ ಅತಿದೊಡ್ಡ ವೈದ್ಯಕೀಯ ಪ್ರವೇಶ ಪರೀಕ್ಷೆಯಾಗಿದ್ದು, ಪ್ರತಿ ವರ್ಷ ಲಕ್ಷಾಂತರ ಅಭ್ಯರ್ಥಿಗಳು ಸುಮಾರು ಒಂದು ಲಕ್ಷ ಪದವಿಪೂರ್ವ ವೈದ್ಯಕೀಯ ಸೀಟುಗಳಿಗೆ ಸ್ಪರ್ಧಿಸುತ್ತಿದ್ದಾರೆ. ಪತ್ರಿಕೆ ಸೋರಿಕೆಯ ಆರೋಪದ ಮೇಲೆ ಮೇ 3 ರ ಪರೀಕ್ಷೆಯನ್ನು ರದ್ದುಗೊಳಿಸಿದ ನಂತರ ಈ ವರ್ಷದ ಪರೀಕ್ಷೆಯನ್ನು ಪರಿಶೀಲನೆಗೆ ಒಳಪಡಿಸಲಾಯಿತು. ನಂತರ ಕೇಂದ್ರ ತನಿಖಾ ದಳ (ಸಿಬಿಐ) ಸೋರಿಕೆಯ ಹಿಂದಿನ ಮಾಸ್ಟರ್‌ಮೈಂಡ್ ಎಂದು ಹೇಳಲಾದ ವ್ಯಕ್ತಿಯನ್ನು ಬಂಧಿಸಿತು ಮತ್ತು ಜೂನ್ 21 ರಂದು ಹೊಸ ಪರೀಕ್ಷೆಯನ್ನು ನಡೆಸಲಾಯಿತು
.
ಈ ಘಟನೆಯು ಮತ್ತೊಮ್ಮೆ ಹೆಚ್ಚು ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಎದುರಿಸುತ್ತಿರುವ ತೀವ್ರ ಒತ್ತಡದ ಬಗ್ಗೆ ಕಳವಳವನ್ನು ಹುಟ್ಟುಹಾಕಿದೆ (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net