ಧರ್ಮೇಂದ್ರ ಪ್ರಧಾನ್​ ರಾಜೀನಾಮೆಗಾಗಿ ಉಪವಾಸ ಸತ್ಯಾಗ್ರಹ; 5 ಕೆಜಿ ತೂಕ ಕಳೆದುಕೊಂಡ ಸೋನಮ್ ವಾಂಗ್ಚುಕ್..CJP

Sonam Wangchuk Loses 5 Kg On Hunger Strike
Sonam Wangchuk Loses 5 Kg On Hunger Strike
Published on

ಪ್ರಮುಖ ಮುಖ್ಯಾಂಶಗಳು

  • ಪರೀಕ್ಷಾ ವ್ಯವಸ್ಥೆಯಲ್ಲಿನ ಅಕ್ರಮಗಳ ಹೊಣೆ ಹೊತ್ತು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕೆಂದು ಆಗ್ರಹ.
  • 7ನೇ ದಿನಕ್ಕೆ ಕಾಲಿಟ್ಟ ಸೋನಮ್ ವಾಂಗ್ಚುಕ್ ಉಪವಾಸ ಸತ್ಯಾಗ್ರಹ
  • ಈಗಾಗಲೇ 5 ಕೆಜಿ ತೂಕ ಇಳಿಕೆ, ಬಿಪಿ ಹಾಗೂ ಶುಗರ್ ಮಟ್ಟದಲ್ಲಿ ಭಾರಿ ಕುಸಿತ.
ನವದೆಹಲಿ: ನೀಟ್ ಸೇರಿದಂತೆ ದೇಶದ ಪರೀಕ್ಷಾ ವ್ಯವಸ್ಥೆಯಲ್ಲಿನ ಅಕ್ರಮಗಳ ಹೊಣೆ ಹೊತ್ತು  ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್​ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಕಾಕ್ರೋಚ್​ ಜನತಾ ಪಕ್ಷ (ಸಿಜೆಪಿ) ನಡೆಸುತ್ತಿರುವ ಪ್ರತಿಭಟನೆ 15ನೇ ದಿನಕ್ಕೆ ಕಾಲಿಟ್ಟಿದೆ.
ಪ್ರತಿಭಟನೆಯಲ್ಲಿ ಭಾಗಿಯಾಗಿರುವ ಪ್ರಸಿದ್ಧ ಪರಿಸರ ಮತ್ತು ಶಿಕ್ಷಣ ಕಾರ್ಯಕರ್ತ ಸೋನಮ್ ವಾಂಗ್ಚುಕ್  ಕಳೆದ ಏಳು ದಿನದಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಇದರಿಂದಾಗಿ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ. ಸದ್ಯ ಅವರ ದೇಹದ ತೂಕ  5 ಕೆಜಿಗಿಂತಲೂ ಹೆಚ್ಚು ಇಳಿಕೆಯಾಗಿದೆ ಎಂದು ಕಾಕ್ರೋಚ್​ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದಿಪ್ಕೆ ಆತಂಕ ವ್ಯಕ್ತಪಡಿಸಿದ್ದಾರೆ.
ಅಭಿಜಿತ್​ ದೀಪ್ಕೆ ಹೇಳಿದ್ದೇನು? 
ಸೋನಮ್ ವಾಂಗ್ಚುಕ್  ಅವರ ಆರೋಗ್ಯ ಕ್ಷೀಣೀಸುತ್ತಿದೆ. ಈಗಾಗಲೇ 5 ಕೆಜಿ ತೂಕ ಇಳಿಕೆ, ಬಿಪಿ ಹಾಗೂ ಶುಗರ್ ಮಟ್ಟದಲ್ಲಿ ಭಾರಿ ಕುಸಿತವಾಗಿದೆ. ಆದರೂ ಶಿಕ್ಷಣ ಸಚಿವರ ರಾಜೀನಾಮೆ ಪಡೆಯುವವರೆಗೂ ಸತ್ಯಾಗ್ರಹ ಕೈಬಿಡುವುದಿಲ್ಲ  ಎಂದು ಪಟ್ಟುಹಿಡಿದು ಪ್ರತಿಭಟನೆಯಲ್ಲಿ ಭಾಗಗಿಯಾಗಿದ್ದಾರೆ. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಅವರ ಪ್ರಾಣವನ್ನು ಪಣಕ್ಕಿಟ್ಟಿದ್ದಾರೆ ಎಂದು ಅಭಿಜಿತ್​ ಹೇಳಿದರು.

ಹುದ್ದೆಯಿಂದ ವಜಾಗೊಳಿಸಿ

ನೀಟ್​ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ನಂತರ 20ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟರು. ಇಷ್ಟಾಗಿದ್ದರೂ ಸಹ ಕೇಂದ್ರ ಸಂಪುಟಕ್ಕೆ ಸಚಿವ ಧರ್ಮೇಂದ್ರ ಪ್ರಧಾನ್​ ಅವರು ಮುಖ್ಯವಾಗ್ತಿರೋದು ಯಾಕೆ?. ಅವರಿಂದಾದ ಲೋಪದೋಷವನ್ನು ಪರಿಗಣಿಸಿ, ಹುದ್ದೆಯಿಂದ ವಜಾಗೊಳಿಸಲು ಇನ್ನೆಷ್ಟು ದಿನ ಕಾಯಬೇಖಕು. ವಾಗ್ಚುಕ್​ ಅವರಿಗೆ ಅಪಾಯ ಸಂಭವಿಸಿದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜೂನ್ 20 ರಿಂದ ಪ್ರತಿಭಟನೆ

ಜೂನ್ 20 ರಿಂದ ದೆಹಲಿಯ ಜಂತರ್​ ಮಂತರ್​​ನಲ್ಲಿ ಸಿಜೆಪಿ ಪ್ರತಿಭಟನೆ ನಡೆಸುತ್ತಿದೆ. ಈ ಹೋರಾಟಕ್ಕೆ ಸೋನಮ್​ ವಾಂಗ್ಚುಕ್​, ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ, ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ, ಹಿರಿಯ ನಾಯಕಿ ಬೃಂದಾ ಕಾರಟ್ ಬೆಂಬಲ ಸೂಚಿಸಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net