26 ದಿನಗಳ ಉಪವಾಸ ಸತ್ಯಾಗ್ರಹ ಹಿಂಪಡೆದ ಸೋನಮ್ ವಾಂಗ್‌ಚುಕ್: ಬೇಗ ಚೇತರಿಸಿಕೊಳ್ಳಿ, ಮೋದಿ ಸಲಹೆ; ನಮ್ಮ ಹೋರಾಟ ಇನ್ನೂ ಮುಗಿದಿಲ್ಲ ಎಂದ ಅಭಿಜಿತ್​ ದಿಪ್ಕೆ! Sonam Wangchuk ends Hunger Strike

26 ದಿನಗಳ ನಂತರ ಸತ್ಯಾಗ್ರಹ ಹಿಂಪಡೆದ ಸೋನಮ್​ ವಾಂಗ್​ಚುಕ್​
26 ದಿನಗಳ ನಂತರ ಸತ್ಯಾಗ್ರಹ ಹಿಂಪಡೆದ ಸೋನಮ್​ ವಾಂಗ್​ಚುಕ್​
Published on

ಪ್ರಮುಖ ಮುಖ್ಯಾಂಶಗಳು

  • 26 ದಿನಗಳ ನಂತರ ಸತ್ಯಾಗ್ರಹ ಹಿಂಪಡೆದ ಸೋನಮ್​ ವಾಂಗ್​ಚುಕ್​
  • ಸೋನಮ್ ವಾಂಗ್‌ಚುಕ್ ಆರೋಗ್ಯ ಚೇತರಿಕೆಗೆ ಮೋದಿ ಹಾರೈಕೆ
  • ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಸಿಜೆಪಿ ಪಟ್ಟು!
ನವದೆಹಲಿ: ನೀಟ್​ ಸೇರಿದಂತೆ ದೇಶದಲ್ಲಿ ನಡೆಯುತ್ತಿರುವ ಪರೀಕ್ಷಾ ಅಕ್ರಮಗಳನ್ನು ಖಂಡಿಸಿ ಪರಿಸರವಾದಿ ಸೋನಮ್​ ವಾಂಗ್​ಚುಕ್​​ (Sonam Wangchuk ends Hunger Strike) ಸತತ 26 ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹವನ್ನು ಹಿಂತೆಗೆದುಕೊಂಡಿದ್ದಾರೆ.
ಸರ್ಕಾರ ನೀಟ್​ ಪರೀಕ್ಷೆಗೆ ಸಂಬಂಧಿಸಿದಂತೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವುದಾಗಿ ಭರವಸೆ ನೀಡಿ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂದೇಶ ಹಂಚಿಕೊಂಡ ಬೆನ್ನಲ್ಲೆ ಈ ಬೆಳವಣಿಗೆ ಕಂಡು ಬಂದಿದೆ.
ಸೋನಮ್​ ಅವರ ಆರೋಗ್ಯ ಚೇತರಿಕೆ ಆಗಲಿ!
ನೀಟ್​ ಪರೀಕ್ಷೆಗೆ ಸಂಬಂಧಿಸಿದಂತೆ ಈಗಾಗಲೇ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಈ ಕುರಿತು ಇಂದು ನಡೆಯಲಿರುವ ಕ್ಯಾಬಿನೆಟ್​ನಲ್ಲಿ ಸಭೆ ನಡೆಸಿ ಮಳೆಗಾಲದ ಅಧಿವೇಶನದಲ್ಲಿ ಮಸೂದೆಯನ್ನು ಅಂಗೀಕಾರ ಮಾಡುವುದಾಗಿ ಪ್ರಧಾನಿಗಳು ಭರವಸೆ ನೀಡಿದ್ದಾರೆ.
ಸೋನಮ್​ ವಾಂಗ್​ಚುಕ್​ ಉಪವಾಸವನ್ನು ನಿಲ್ಲಿಸಿದನ್ನು ಸ್ವಾಗತಿಸಿರುವ ಪ್ರಧಾನಿಗಳು, ಅವರ ಆರೋಗ್ಯ ಬೇಗ ಚೇತರಿಗೆ ಕಾಣಲಿ, ಹಾಗೂ ವೈದ್ಯರು ನೀಡುವ ಸಲಹೆಯನ್ನು ಅವರು ಪಾಲಿಸಲಿ ಎಂದು ನಾನು ಮನವಿ ಮಾಡುತ್ತೇನೆ ಎಂದಿದ್ದಾರೆ.

ನಮ್ಮ ಹೋರಾಟ ಮುಂದುವರಿಯುತ್ತದೆ!

ಸೋನಮ್​ ವಾಂಗ್​ಚುಕ್​ ಅವರು ಉಪವಾಸ ನಿಲ್ಲಿಸಿದಕ್ಕೆ, ಅಭಿನಂದನೆ ವ್ಯಕ್ತ ಪಡಿಸಿರುವ ಸಿಜೆಪಿ ಸ್ಥಾಪಕ ಅಭಿಜಿತ್​ ದಿಪ್ಕೆ, ಈ ಹೋರಾಟಕ್ಕಾಗಿ ನೀವು ನಿಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ಮಾಡಿದಿರಿ. ಆದರೆ ನಮ್ಮ ಪ್ರತಿಭಟನೆ ಇಲ್ಲಿಗೆ ನಿಲ್ಲಲ್ಲ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್​ ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದ್ದಾರೆ, (ಏಜನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net