ಸೋನಮ್ ಬ್ರೋ ಉಪವಾಸ ಸಾಕು, ನನ್ನ ಮನೆಯಿಂದ ಊಟ ಕಳುಹಿಸುತ್ತೇನೆ: ಸಲ್ಮಾನ್ ಖಾನ್ ಮನವಿಗೆ ಮಣಿದರಾ ಸೋನಮ್ ವಾಂಗ್‌ಚುಕ್? Salman Khan on Sonam Wangchuk
"ಸೋನಮ್ ಬ್ರೋ ಉಪವಾಸ ಸಾಕು, ನನ್ನ ಮನೆಯಿಂದ ಊಟ ಕಳುಹಿಸುತ್ತೇನೆ!" - ನಟ ಸಲ್ಮಾನ್ ಖಾನ್
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
"ಸೋನಮ್ ಬ್ರೋ ಉಪವಾಸ ಸಾಕು, ನನ್ನ ಮನೆಯಿಂದ ಊಟ ಕಳುಹಿಸುತ್ತೇನೆ!" - ನಟ ಸಲ್ಮಾನ್ ಖಾನ್
26 ದಿನಗಳ ನೀಟ್ (NEET) ವಿರುದ್ಧದ ಉಪವಾಸ ಸತ್ಯಾಗ್ರಹ ಹಿಂಪಡೆದ ಸೋನಮ್ ವಾಂಗ್‌ಚುಕ್
ಸಲ್ಮಾನ್ ಖಾನ್ ಮಾಡಿದ ವಿಶೇಷ ಮನವಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್
ಮುಂಬೈ: ನೀಟ್ ಪರೀಕ್ಷೆಯಲ್ಲಾದ ಅಕ್ರಮವನ್ನು ವಿರೋಧಿಸಿ ಪರಿಸರವಾದಿ ಸೋನಮ್ ವಾಂಗ್‌ಚುಕ್ 26 ದಿನಗಳ ನಡೆಸಿದ್ದ ತಮ್ಮ ಉಪವಾಸ ಸತ್ಯಾಗ್ರಹವನ್ನು ಹಿಂತೆಗೆದುಕೊಂಡಿದ್ದಾರೆ. ಸೋನಮ್ ವಾಂಗ್‌ಚುಕ್ ಅವರನ್ನು ಆಸ್ಪತ್ರೆಯಲ್ಲಿ ಬೇಟಿ ಮಾಡಿದ ಬಿಜೆಪಿ ನಾಯಕರು ಸೂಪ್ ಕುಡಿಸುವ ಮೂಲಕ ಉಪವಾಸವನ್ನು ನಿಲ್ಲಿಸುವಂತೆ ಮಾಡಿದ್ದಾರೆ.
ಆದರೆ, ಸೋಷಿಯಲ್ ಮೀಡಿಯಾನಲ್ಲಿ ಸೋನಮ್ ವಾಂಗ್‌ಚುಕ್ ತಮ್ಮ ಉಪವಾಸವನ್ನು ಹಿಂಪಡೆಯಲು ಬಾಲಿವುಡ್ನ ಬ್ಯಾಡ್ ಬಾಯ್ ಖ್ಯಾತಿಯ ಸಲ್ಮಾನ್ ಖಾನ್ (Salman Khan on Sonam Wangchuk) ಅವರೇ ಕಾರಣ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.
ದೆಹಲಿಯ ಜಂತರ್ ಮಂತರ್ನಲ್ಲಿ ನಡೆಯುತ್ತಿರುವ ಹೋರಾಟವನ್ನು ಬೆಂಬಲಿಸಿ ಬಾಲಿವುಡ್ ನಟ ಸಲ್ಮಾನ್ ಖಾನ್, ವಿದ್ಯಾರ್ಥಿಗಳು ದೇಶ ಪ್ರೇಮದ ಸಂಕೇತ ದಯವಿಟ್ಟು ಇದಕ್ಕೆ ರಾಜಕೀಯ ಬಣ್ಣ ಬಳಿಯಬೇಡಿ, ಪೇಪರ್ ಲೀಕ್ ಇದು ಗಂಭೀರವಾದ ಸಮಸ್ಯೆಯಾಗಿದೆ. ಆದರೆ ಸರ್ಕಾರ ಇದನ್ನು ಖಂಡಿತವಾಗಿ ಸರಿ ಪಡಿಸಲಿದೆ ಎಂದು ಪೋಸ್ಟ್ವೊಂದನ್ನು ಹಂಚಿಕೊಂಡಿದ್ದರು.
ಈ ಪೋಸ್ಟ್ನ ನಂತರ ಇನ್ನೊಂದು ಪೋಸ್ಟ್ನ್ನು ಹಂಚಿಕೊಂಡಿದ್ದ ಸಲ್ಮಾನ್, ಈಗಾಗಲೇ ಮಾನ್ಯ ಪ್ರಧಾನಿಗಳು ಈ ಸಮಸ್ಯೆಗೆ ಪರಿಹಾರ ನೀಡುವುದಾಗಿ ಹೇಳಿದ್ದಾರೆ. ಆರೋಪಿಗಳಿಗೆ ಶಿಕ್ಷೆ ಕೊಡಿಸುವುದಾಗು ಟ್ವಿಟ್ ಮಾಡಿದ್ದಾರೆ, ಹಾಗೂ ನನಗೆ ಈ ಬಗ್ಗೆ ನಂಬಿಕೆಯಿದೆ. ಹೀಗಾಗಿ ಪ್ರತಿಭಟನಾ ಸ್ಥಳದಿಂದ ಹೋರಾಟಗಾರರು ತಮ್ಮ ಮನೆಗೆ ಹಿಂತಿರುಗಿ, ವಿದ್ಯಾರ್ಥಿಗಳೇ ನಿಮ್ಮ ಮನೆಯಲ್ಲಿರುವ ಪಾಲಕರನ್ನು ನೀವು ಸೇರಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಹಾಗೆಯೇ, ಪ್ರೀತಿಯ ಸೋನಮ್ ಬ್ರೋ, ಇಲ್ಲಿಗೆ ನಿನ್ನ ಉಪವಾಸ ಸಾಕು, ಇದನ್ನು ಮುಂದುವರಿಸಬೇಡ, ಮುಂದಿನ ದಿನಗಳಲ್ಲಿ ನಿನ್ನ ಅಗತ್ಯವಿದೆ, ಏನಾದರೂ ತಿನ್ನು, ನೀನು ಬಯಸಿದರೆ ನನ್ನ ಮನೆಯಿಂದಲೇ ಅಡುಗೆ ಕಳಿಸುತ್ತೇನೆ ಎಂದು ಬರೆದುಕೊಂಡಿದ್ದರು, (ಏಜನ್ಸೀಸ್).