ಆಸ್ತಿ ಮಾಲೀಕತ್ವ ಕಳೆದುಕೊಂಡಿದ್ದಕ್ಕೆ ಸಿಟ್ಟು; ನಡು ರಸ್ತೆಯಲ್ಲಿ ತಂದೆಯನ್ನೇ ಕೊಂದ ಪಾಪಿ ಮಗ..Son Kills Father

Property Dispute Father Murder
Property Dispute Father Murder
Published on

ಪ್ರಮುಖ ಮುಖ್ಯಾಂಶಗಳು

  • ಆಸ್ತಿ ಮಾಲೀಕತ್ವ ಸಂಬಂಧ ಕೋರ್ಟ್​ ಕೇಸ್ ವಿಚಾರಣೆಯಲ್ಲಿ ಸೋತಿದ್ದಕ್ಕೆ ಸಿಟ್ಟು​​
  • ಛತ್ರಪತಿ ಸಂಭಾಜಿನಗರದಲ್ಲಿ 82 ವರ್ಷದ ತಂದೆಯನ್ನೇ ಕೊಂದ ಮಗ
  • ಮನೆ ಮಾಲೀಕತ್ವಕಳೆದುಕೊಂಡಿದ್ದಕ್ಕೆ ಸಿಟ್ಟು
ಮುಂಬೈ: ಆಸ್ತಿ ಮಾಲೀಕತ್ವ ವಾಪಸ್​ ನೀಡುವ ವಿಚಾರದಲ್ಲಿ ನಡೆಯುತ್ತಿದ್ದ ಕೋರ್ಟ್​ ಕೇಸ್​​​ನಲ್ಲಿ ಸೋತ ಹಿನ್ನೆಲೆ, ತಂದೆಯ ಮೇಲೆ ಸಿಟ್ಟಾದ ಯುವಕನೊಬ್ಬ ನಡುರಸ್ತೆಯಲ್ಲೇ ಆತನಿಗೆ ಇರಿದು ಕೊಂದ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿನಗರದಲ್ಲಿ ನಡೆದಿದೆ.
82 ವರ್ಷದ ಜಾಫರ್ ಖಮರುದ್ದೀನ್ ಸಯ್ಯದ್ ಪಟೇಲ್ ಜಲಸಂಪನ್ಮೂಲ ಇಲಾಖೆಯ ನಿವೃತ್ತ ಉದ್ಯೋಗಿ. ಇವರನ್ನು ವೈದ್ಯಕೀಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದ ಮಗ ಅಬ್ದುಲ್ ರೆಹಮಾನ್ ಅಬ್ದುಲ್ ಜಾಫರ್ ಕೊಂದಿದ್ದಾನೆ ಎನ್ನಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ ಎನ್ನಲಾಗಿದೆ.

ನಿತ್ಯ ಮನೆಯಲ್ಲಿ ಜಗಳ

ಜಾಫರ್ ಖಮರುದ್ದೀನ್ ಸಯ್ಯದ್ ಪಟೇಲ್ ಅವರು ಅಬ್ದುಲ್ ರೆಹಮಾನ್ ಅಬ್ದುಲ್ ಜಾಫರ್​ನನ್ನು ಮನೆಯಿಂದ ಹೊರ ಹಾಕಲು ಎರಡು ವರ್ಷಗಳ ಕಾಲ ಕಾನೂನು ಹೋರಾಟ ನಡೆಸಿದ್ದರು. ಮಗ ನಿಯಮಿತವಾಗಿ ಮನೆಯವ ಜೊತೆಗೆ ಜಗಳವಾಡಿ, ಹಲ್ಲೆ ಮಾಡುತ್ತಿದ್ದ ಎಂದು ಆರೋಪಿಸಿದ್ದರು.
ಇದರಿಂದ ಬೇಸತ್ತ ಜಾಫರ್ ಖಮರುದ್ದೀನ್ ಸಯ್ಯದ್ ಪಟೇಲ್ ಮಗನ ಹೆಸರಲ್ಲಿದ್ದ ಮನೆಯನ್ನು ವಾಪಸ್​ ತಮ್ಮದಾಗಿಸಿಕೊಳ್ಳು ಕೋರ್ಟ್​ ಮೊರೆಹೋಗಿದ್ದರು. ಕೋರ್ಟ್​​ ಅವರ ಪರವೇ ತೀರ್ಪು ನೀಡಿತ್ತು, ಇಷ್ಟೇ ಅಲ್ಲದೇ ಮಗನನ್ನು ಮನೆಯಿಂದ ಹೊರಹಾಕುವಂತೆ ಆದೇಶಿಸಿ, ಮರಳಿ ಮನೆ ಮಾಲೀಕತ್ವವನ್ನು ಪಟೇಲ್​ರಿಗೆಕೊಟ್ಟಿತು.

ಮಗಳಿಗೂ ಗಾಯ

ಇದರಿಂದ ತೀವ್ರ ಕುಪಿತಗೊಂಡಿದ್ದ ಆತ ವಾಪಸ್​ ಮನೆಗೆ ಆಟೋದಲ್ಲಿ ತೆರಳುತ್ತಿದ್ದ ವೇಳೆ ಕಂಡ ತಂದೆಯ ಬಳಿ ರಿಕ್ಷಾ ನಿಲ್ಲಿಸಿ, ಸಾರ್ವಜನಿಕರ ಮುಂದೆ ಅವರನ್ನು ಮಾರಣಾಂತಿಕವಾಗಿ ಇರಿದು ಕೊಂದಿದ್ದಾನೆ. ಈ ಗಲಾಟೆಯಲ್ಲಿ ಮಗಳು ಕೂಡ ಗಾಯಗೊಂಡಿದ್ದಾರೆ ಎನ್ನಲಾಗಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net