

ತೆಲಂಗಾಣ: ಹೈದರಾಬಾದ್‌ನವನಸ್ಥಲಿಪುರಂ ಪ್ರದೇಶದಲ್ಲಿ, 30 ವರ್ಷದ ಸಾಫ್ಟ್‌ವೇರ್ ವೃತ್ತಿಪರೆ ಸುನೀತಾ ಎಂಬುವವರನ್ನು ಆಕೆಯಮಾಜಿ ಪತಿ ಮಹೇಶ್ ಎಂಬಾತ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಈ ಯೋಜಿತ ದಾಳಿಯು ವೈಯಕ್ತಿಕ ದ್ವೇಷದಹಿನ್ನೆಲೆಯಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗ್ರೀನ್ ಸಿಟಿಕಾಲೋನಿಯಲ್ಲಿರುವ ಸುನೀತಾ ಅವರ ನಿವಾಸದಲ್ಲಿ ಈ ಕೃತ್ಯ ನಡೆದಿದೆ. ಪೊಲೀಸರ ಪ್ರಕಾರ, ಆರೋಪಿ ಮಹೇಶ್ಮತ್ತು ಸುನೀತಾ ಇತ್ತೀಚೆಗಷ್ಟೇ ವಿಚ್ಛೇದನ ಪಡೆದಿದ್ದರು. ಬೇರ್ಪಟ್ಟ ನಂತರ ಸುನೀತಾ ಮತ್ತೊಂದು ಮದುವೆಯಾಗಿದ್ದರು.(marriage) ಈ ವಿಷಯವನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಮಹೇಶ್, ಸುನೀತಾಳನ್ನು ಕೊಲ್ಲಲು ಸಂಚು ರೂಪಿಸಿದ್ದನು.
ಬರ್ಬರ ದಾಳಿನಡೆದಿದ್ದು ಹೇಗೆ?
ಬುಧವಾರದಂದುಮಹೇಶ್ ಎರಡು ಚಾಕುಗಳು ಮತ್ತು ಪೆಟ್ರೋಲ್ ಕ್ಯಾನ್‌ನೊಂದಿಗೆ ಸುನೀತಾಳ ಮನೆಗೆ ಹೋಗಿದ್ದಾನೆ. ಮನೆಯಲ್ಲಿಮಾತಿನ ಚಕಮಕಿ ನಡೆಸಿದ ನಂತರ, ಆತ ಆಕೆಯ ಮೇಲೆ ಮಾರಣಾಂತಿಕವಾಗಿ ದಾಳಿ ಮಾಡಿದ್ದಾನೆ. ಸುನೀತಾಳಿಗೆಹಲವು ಬಾರಿ ಚಾಕುವಿನಿಂದ ಇರಿದಿದ್ದಲ್ಲದೆ, ಹೂವಿನ ಕುಂಡದಿಂದ ತಲೆಗೆ ಬಲವಾಗಿ ಹೊಡೆದಿದ್ದಾನೆ. ತೀವ್ರಗಾಯಗೊಂಡ ಸುನೀತಾ ರಕ್ತದ ಮಡುವಿನಲ್ಲಿ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆರೋಪಿ ಸೆರೆ
ಕೃತ್ಯ ಎಸಗಿದನಂತರ ಮಹೇಶ್ ಸ್ಥಳದಿಂದ ಪರಾರಿಯಾಗಿದ್ದನು. ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ ನಂತರ, ಅವರು ಸ್ಥಳಕ್ಕೆಧಾವಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಕಾರ್ಯಾಚರಣೆ ಕೈಗೊಂಡ ಪೊಲೀಸರು ಘಟನೆನಡೆದ ಕೆಲವೇ ಗಂಟೆಗಳಲ್ಲಿ ಆರೋಪಿ ಮಹೇಶ್‌ನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಸದ್ಯ ಆತ ಪೊಲೀಸ್ಕಸ್ಟಡಿಯಲ್ಲಿದ್ದು, ವಿಚಾರಣೆ ಮುಂದುವರಿದಿದೆ,(ಏಜೆನ್ಸೀಸ್).