

ಪ್ರಮುಖ ಮುಖ್ಯಾಂಶಗಳು
Income Tax Alert: ಯೂಟ್ಯೂಬ್, ಇನ್‌ಸ್ಟಾಗ್ರಾಮ್ ಹಾಗೂ ವಿವಿಧ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಸಕ್ರಿಯರಾಗಿರುವ ಕಂಟೆಂಟ್ ಕ್ರಿಯೇಟರ್ಸ್‌ಗೆ ಆದಾಯ ತೆರಿಗೆ ಇಲಾಖೆ ಇದೀಗ ಎಚ್ಚರಿಕೆಯೊಂದನ್ನು ನೀಡಿದೆ. ಡಿಜಿಟಲ್ ಲೋಕದಲ್ಲಿ ಕಂಟೆಂಟ್ ರಚಿಸುವುದು ಕೇವಲ ಹವ್ಯಾಸವಾಗಿ ಉಳಿದಿಲ್ಲ. ಬದಲಾಗಿ ಅದೊಂದು ಉದ್ಯೋಗದ ಆದಾಯವಾಗಿ ಬೆಳೆದಿದೆ. ಆದರೆ, ಈ ಉದ್ಯೋಗದಿಂದ ಬರುವ ಆದಾಯ ಸಂಪೂರ್ಣ ತೆರಿಗೆ ಮುಕ್ತವಲ್ಲ ಎಂಬುದನ್ನು ಕ್ರಿಯೇಟರ್‌ಗಳು ನೆನಪಿನಲ್ಲಿಡಬೇಕಿದೆ.