ಬೆಂಗಳೂರು: ಭಾರತದಲ್ಲಿ ಹಲವು ವಿಚಿತ್ರ ಹಾಗೂ ವಿಶಿಷ್ಟ ಸಂಪ್ರದಾಯಗಳಿರುವ ಹಳ್ಳಿಗಳು ಕಂಡು ಬರುತ್ತವೆ. ಅದರಲ್ಲಿ ವಿಶೇಷವಾಗಿ ಗಮನ ಸೆಳೆಯುವ ಸ್ಥಳವೆಂದರೆ ಶೆಟ್‌ಪಾಲ್. ಈ ಹಳ್ಳಿಯನ್ನು “ಭಾರತದ ಸ್ನೇಕ್ ವಿಲೇಜ್”( Snake Villag) ಅಥವಾ “ಹಾವುಗಳ ಹಳ್ಳಿ” ಎಂದು ಕರೆಯಲಾಗುತ್ತದೆ. ಕಾರಣ, ಇಲ್ಲಿ ಜನರು ಹಾವುಗಳ ಜೊತೆ ಭಯವಿಲ್ಲದೆ ಸಹಜವಾಗಿ ಬದುಕುತ್ತಾರೆ. ವಿಶೇಷವಾಗಿ ವಿಷಕಾರಿ ನಾಗರಹಾವುಗಳು ಗ್ರಾಮದಲ್ಲಿ ಮುಕ್ತವಾಗಿ ಸಂಚರಿಸಿದರೂ ಯಾರೂ ಅವುಗಳಿಗೆ ಹಾನಿ ಮಾಡುವುದಿಲ್ಲ.