ಹೌದು, ಒಂದು ವರದಿಯ ಪ್ರಕಾರ, ಮದುವೆಗೂ ಮೊದಲೇ ಪಲಾಶ್ ಮುಚ್ಚಲ್ ಅವರು ಸ್ಮೃತಿ ಅವರಿಗೆ ಮೋಸ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ, ತನ್ನ ಎಕ್ಸ್ ಲವರ್ಗೆ ಪ್ರಪೋಸ್ ಮಾಡಿದ ಕೆಲವಷ್ಟು ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ಯಕ್ಕೆ ಹರಿದಾಡುತ್ತಿದೆ. ಇನ್ನು ವೈರಲ್ ಆಗಿರುವ ಫೋಟೋಗಳಲ್ಲಿ ಪ್ರಪೋಸಲ್ ಸೆಟಪ್ ಕಾಣುತ್ತಿದೆ. ಪಲಾಶ್ ತನ್ನ ಆಗಿನ ಸಂಗಾತಿಯ ಮುಂದೆ ಮಂಡಿಯೂರಿ ಕುಳಿತಿದ್ದಾನೆ. ಪಲಾಶ್, ಸ್ಮೃತಿ ಮಂಧಾನಾಳನ್ನು ನೋಡುವ ಮೊದಲು ತನ್ನ ಗೆಳತಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿರಬಹುದು ಎಂದು ನೆಟ್ಟಿಗರನ್ನು ಊಹಿಸುತ್ತಿದ್ದಾರೆ. ಮಾಜಿ ಗೆಳತಿಯನ್ನು ಪ್ಲಾಸ್ಟಿಕ್ ಸರ್ಜನ್ ಬಿರ್ವಾ ಶಾ ಎಂದು ನೆಟ್ಟಿಗರು ಗುರುತಿಸಿದ್ದಾರೆ ಮತ್ತು ಪ್ರಪೋಸಲ್ ಫೋಟೋ 2017 ರದ್ದಾಗಿದೆ ಎಂದು ಹೇಳಿಕೊಂಡಿದ್ದಾರೆ.