ಲಂಕಾ ವಿರುದ್ಧ ಭಾರತಕ್ಕೆ ಭರ್ಜರಿ ಗೆಲುವು: ವಿಶ್ವ ದಾಖಲೆ ಬರೆಯುವ ಮೂಲಕ ಹೊಸ ಇತಿಹಾಸ ಸೃಷ್ಟಿಸಿದ ಸ್ಮೃತಿ ಮಂಧಾನ!

Smriti Mandhana
Smriti Mandhana
Published on
ಆಂಧ್ರಪ್ರದೇಶ: ವಿಶಾಖಪಟ್ಟಣದಲ್ಲಿ ಭಾನುವಾರ ನಡೆದ ಶ್ರೀಲಂಕಾ ವಿರುದ್ಧದ ಮೊದಲ ಮಹಿಳಾ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಸ್ಟಾರ್ ಓಪನರ್ ಸ್ಮೃತಿ ಮಂಧಾನ ಹೊಸ ಇತಿಹಾಸ ಸೃಷ್ಟಿಸಿದರು.
ಹೌದು, ಡಿಸೆಂಬರ್ 2ರಂದು ನಡೆದ ಭಾರತ ಮಹಿಳಾ ಕ್ರಿಕೆಟ್ ತಂಡ ಶ್ರೀಲಂಕಾ ಮಹಿಳಾ ತಂಡದ ವಿರುದ್ಧ ಮೊದಲ T20I ಪಂದ್ಯದಲ್ಲಿ 8 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಶ್ರೀಲಂಕಾ ಮೊದಲು ಬ್ಯಾಟಿಂಗ್ ಮಾಡಿ 20 ಓವರ್‌ಗಳಲ್ಲಿ 121/6 ರನ್ ಗಳಿಸಿತು (ವಿಶ್ಮಿ ಗುಣರತ್ನೆ 39, ಹರ್ಷಿತಾ ಸಮರವಿಕ್ರಮ 21). ಭಾರತದ ಕ್ರಾಂತಿ ಗೌಡ್, ದೀಪ್ತಿ ಶರ್ಮಾ ಮುಂತಾದವರು ಬಿಗಿ ಬೌಲಿಂಗ್ ದಾಳಿಯಿಂದ ವಿಕೆಟ್ ಪಡೆಯುವಲ್ಲಿ ಯಶ ಕಂಡರು. ಇನ್ನು 122 ರನ್​ ಗುರಿ ಬೆನ್ನಟ್ಟಿದ ಭಾರತ ಕೇವಲ 14.4 ಓವರ್‌ಗಳಲ್ಲಿ 122/2 ತಲುಪಿ 32 ಎಸೆತಗಳು ಬಾಕಿ ಇರುವಾಗಲೇ ಗೆಲುವು ಸಾಧಿಸಿತು.

ಸ್ಮೃತಿ ಮಂಧಾನರ ವಿಶ್ವ ದಾಖಲೆ

ಸ್ಮೃತಿ 25 ಎಸೆತಗಳಲ್ಲಿ 25 ರನ್ (ಕೆಲವು ಅದ್ಭುತ ಬೌಂಡರಿಗಳೊಂದಿಗೆ) ಗಳಿಸಿ ಔಟಾದರೂ, ಈ ಇನ್ನಿಂಗ್ಸ್‌ನಲ್ಲಿ ಅವರು ಮಹಿಳಾ T20I ಕ್ರಿಕೆಟ್‌ನಲ್ಲಿ 4000 ರನ್‌ಗಳ ಮೈಲುಗಲ್ಲು ತಲುಪಿದರು. ನ್ಯೂಜಿಲೆಂಡ್‌ನ ಸೂಜಿ ಬೇಟ್ಸ್ ನಂತರ ಈ ವಿಶ್ವದಾಖಲೆ ಮಾಡಿದ್ದಾರೆ. ಅಲ್ಲದೆ, ಪ್ರಥಮ ಭಾರತೀಯ ಮಹಿಳಾ ಕ್ರಿಕೆಟಿಗಳಾಗಿ ಈ ಸಾಧನೆ ಶಿಖರ ತಲುಪಿದ್ದಾರೆ. ಅತಿ ವೇಗವಾಗಿ ಅಂದರೆ, ಬೇಟ್ಸ್‌ಗಿಂತ ವೇಗವಾಗಿ (ಕೇವಲ 3227 ಎಸೆತಗಳಲ್ಲಿ) ಈ ಮೈಲುಗಲ್ಲು ತಲುಪಿದ ವಿಶ್ವ ಕ್ರಿಕೆಟರ್​ ಆಗಿ ಹೊರ ಹೊಮ್ಮಿದ್ದಾರೆ.

ಜೆಮಿಮಾ ರೊಡ್ರಿಗಸ್ ಮಿಂಚಿನ ಇನ್ನಿಂಗ್ಸ್

122 ರನ್ ಗಳ ಗುರಿಯನ್ನು ಬೆನ್ನಟ್ಟಿದ ಭಾರತ ತಂಡವು ಆರಂಭಿಕ ಹಂತದಲ್ಲಿ ಶಫಾಲಿ ವರ್ಮಾ (9) ಅವರನ್ನು ಕಳೆದುಕೊಂಡಿತು. ದಾಖಲೆಯ ರನ್ ಗಳಿಸಿದ ನಂತರ ಸ್ಮೃತಿ ಮಂಧಾನ (25) ಔಟಾದರು. ಈ ಹಂತದಲ್ಲಿ ಕ್ರೀಸ್ ಗೆ ಬಂದ ಜೆಮಿಮಾ ರೊಡ್ರಿಗಸ್ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ತಂಡವನ್ನು ಗೆಲುವಿನ ದಡಕ್ಕೆ ಕೊಂಡೊಯ್ದರು.
ಕಷ್ಟಕರವಾದ ಪಿಚ್ ಹೊರತಾಗಿಯೂ, ಜೆಮಿಮಾ ಸುಲಭವಾಗಿ ರನ್ ಗಳಿಸಿದರು. ಅವರು 44 ಎಸೆತಗಳಲ್ಲಿ ಅಜೇಯ 69 ರನ್ ಗಳಿಸಿದರು. ನಾಯಕಿ ಹರ್ಮನ್ಪ್ರೀತ್ ಕೌರ್ (15*) ಅವರೊಂದಿಗೆ, ಅವರು ಕೇವಲ 14.4 ಓವರ್‌ಗಳಲ್ಲಿ ತಮ್ಮ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. ಜೆಮಿಮಾ ಒಂಟಿಯಾಗಿ ಭಾರತದ ಒಟ್ಟು ಮೊತ್ತದ ಅರ್ಧಕ್ಕಿಂತ ಹೆಚ್ಚು ಗಳಿಸುವ ಮೂಲಕ ಮಿಂಚಿನ ಇನ್ನಿಂಗ್ಸ್ ಕಟ್ಟಿದ್ದರು,(ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net