Indian Railways: ಭಾರತೀಯ ರೈಲ್ವೆಯಲ್ಲಿ ದಿನನಿತ್ಯ ಲಕ್ಷಾಂತರ ಪ್ರಯಾಣಿಕರು ಪ್ರಯಾಣಿಸುತ್ತಾರೆ. ನೀವು ಕೂಡ ರೈಲು ಪ್ರಯಾಣಿಕರಾಗಿದ್ದರೆ, ರೈಲ್ವೆ ಇಲಾಖೆ ತಂದಿರುವ ಇತ್ತೀಚಿನ ಮಹತ್ವದ ನಿಯಮಗಳ ಬಗ್ಗೆ ತಿಳಿದುಕೊಳ್ಳುವುದು ಅತ್ಯಗತ್ಯ. ಇತ್ತೀಚಿಗೆ ಸಂಸತ್ತಿನಲ್ಲಿ ತಿದ್ದುಪಡಿ ತರಲಾದ ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಕಾಯ್ದೆ, 2026ರ ಅಡಿಯಲ್ಲಿ, ರೈಲ್ವೆ ಕಾಯ್ದೆ 1989 ಕ್ಕೆ ಪ್ರಮುಖ ತಿದ್ದುಪಡಿಗಳನ್ನು ತರಲಾಗಿದ್ದು, 2026ರ ಜೂನ್ 19 ರಿಂದಲೇ ಇವು ಅಧಿಕೃತವಾಗಿ ಜಾರಿಗೆ ಬಂದಿವೆ.