ಸ್ಮಾರ್ಟ್ಫೋನ್ ತಯಾರಿಕಾ ವೆಚ್ಚದಲ್ಲಿ ಮೆಮೊರಿ ಚಿಪ್ಗಳ ಪಾಲು ದೊಡ್ಡದಾಗಿರುತ್ತದೆ. ರ್ಯಾಮ್ ಬೆಲೆ ಹೆಚ್ಚಾದಾಗ ಮೊಬೈಲ್ ಕಂಪನಿಗಳ ಮುಂದೆ ಎರಡು ಆಯ್ಕೆಗಳಿರುತ್ತವೆ- ಒಂದೋ ಆ ಹೆಚ್ಚುವರಿ ವೆಚ್ಚವನ್ನು ತಾವೇ ಭರಿಸಿ ಲಾಭದ ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳುವುದು, ಇಲ್ಲವೇ ಆ ಹೊರೆಯನ್ನು ಗ್ರಾಹಕರ ಮೇಲೆ ಹಾಕುವುದು. ಉದ್ಯಮದ ತಜ್ಞರು ಹೇಳುವ ಪ್ರಕಾರ, ಆರಂಭದಲ್ಲಿ ಕೆಲವು ಕಂಪನಿಗಳು ಮಾರುಕಟ್ಟೆಯಲ್ಲಿ ಪೈಪೋಟಿ ಉಳಿಸಿಕೊಳ್ಳಲು ಬೆಲೆಯನ್ನು ಮೊದಲಿದ್ದ ಮಟ್ಟದಲ್ಲೇ ಇಡಬಹುದು. ಆದರೆ, ಚಿಪ್ಗಳ ಬೆಲೆ ನಿರಂತರವಾಗಿ ಏರುತ್ತಲೇ ಹೋದರೆ, ಅಂತಿಮವಾಗಿ ಸ್ಮಾರ್ಟ್ಫೋನ್ಗಳು, ಟ್ಯಾಬ್ಲೆಟ್ಗಳು ಮತ್ತು ಲ್ಯಾಪ್ಟಾಪ್ಗಳ ಚಿಲ್ಲರೆ ಮಾರಾಟದ ಬೆಲೆ ಏರಿಕೆಯಾಗುವುದು ಗ್ಯಾರಂಟಿ. ವಿಶೇಷವಾಗಿ ಯಾವ ಫೋನ್ಗಳು ‘ಎಐ ಫೀಚರ್’ಗಳನ್ನೇ ಪ್ರಮುಖ ಆಕರ್ಷಣೆಯಾಗಿ ಇಟ್ಟುಕೊಂಡು ಮಾರುಕಟ್ಟೆಗೆ ಬರುತ್ತವೆಯೋ, ಅವುಗಳ ಬೆಲೆಯಲ್ಲಿ ದೊಡ್ಡ ಮಟ್ಟದ ಏರಿಕೆ ಕಂಡುಬರಬಹುದು.