ನ್ಯೂಯಾರ್ಕ್: ತಂತ್ರಜ್ಞಾನ ಲೋಕದ ಧ್ರುವತಾರೆ, ಎಕ್ಸ್ (ಟ್ವಿಟರ್) ಹಾಗೂ ಟೆಸ್ಲಾ ಒಡೆಯ ಎಲಾನ್ ಮಸ್ಕ್(Elon Musk) ಸದಾ ಸುದ್ದಿಯಲ್ಲಿರುವ ವ್ಯಕ್ತಿ. ಅವರು ಹಾಕುವ ಒಂದು ಪೋಸ್ಟ್ ಜಾಗತಿಕ ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುತ್ತದೆ. ಇಂತಹ ಪ್ರಭಾವಿ ವ್ಯಕ್ತಿ ತನ್ನ ದೈನಂದಿನ ಜೀವನದಲ್ಲಿ ಯಾವ ಗ್ಯಾಜೆಟ್‌ಗಳನ್ನು ಬಳಸುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇದ್ದೇ ಇರುತ್ತದೆ. ಈಗ ಆ ಕುತೂಹಲಕ್ಕೆ ತೆರೆ ಬಿದ್ದಿದ್ದು, ಮಸ್ಕ್ ಕೈಯಲ್ಲಿರುವ ಫೋನ್ ಯಾವುದು ಎಂಬ ರಹಸ್ಯ ಫೋಟೋವೊಂದರ ಮೂಲಕ ಬಹಿರಂಗವಾಗಿದೆ.