ಎಂಗೇಜ್ಮೆಂಟ್​ ನಂತ್ರ ಚೇತನ್​ನೊಂದಿಗೆ ರಹಸ್ಯವಾಗಿ ಸಿಯಾ ಮದುವೆ?; ವೆಡ್ಡಿಂಗ್​ ಚಾಟ್​ನಿಂದ ಗುಟ್ಟು ರಟ್ಟು, Pune

Siya Married Lover Chetan
Siya Married Lover Chetan
Published on

ಪ್ರಮುಖ ಮುಖ್ಯಾಂಶಗಳು

  • ಕೇತನ್​ ಜೊತೆಗಿನ ಎಂಗೇಜ್​​ಮೆಂಟ್​ ನಂತರ ಚೇತನ್​ ಜೊತೆಗೆ ರಹಸ್ಯ ಮದುವೆ
  • ಮದುವೆ ಪತ್ರ ಹಾಗೂ ಇಬ್ಬರು ನಿಂತು ಹಾರ ಧರಿಸಿರುವ ಫೋಟೋಗಾಗಿ ಪೊಒಲೀಸರಿಂದ ತನಿಖೆ
  • ಕೇತನ್​ನೊಂದಿಗೆ ಎಂಗೇಜ್​​ಮೆಂಟ್ ಮಾಡಿಕೊಂಡ 4 ತಿಂಗಳ ನಂತರ ಮದುವೆ
Siya Married Lover Chetan:
ಲೋಹಗಡ್​ ಕೋಟೆಯಲ್ಲಿ ಕೊಲೆಯಾದ ಕೇತನ್​ ಅಗರ್ವಾಲ್​ ಕೇಸ್​​ನಲ್ಲಿ ಮತ್ತೊಂದು ರೋಚಕ ತಿರುವು ಸಿಕ್ಕಿದೆ. ಕೇತನ್​​ ಜೊತೆ ಎಂಗೇಜ್​ಮೆಂಟ್​​​​ ಮಾಡಿಕೊಂಡ ನಂತರ ಚೇತನ್​ ಚೌಧರಿ ಜೊತೆಗೆ ಸಿಯಾ ಗುಟ್ಟಾಗಿ ಮದುವೆಯಾಗಿದ್ದಳು ಎನ್ನುವ ವಿಚಾರ ಸದ್ಯ ಬೆಳಕಿಗೆ ಬಂದಿದೆ.
ಮದುವೆಗೆ ಅದ್ದೂರಿ ತಯಾರಿ
20 ವರ್ಷದ ಸಿಯಾ ಗೋಯಲ್​​ಗೆ 25 ವರ್ಷದ ಕೇತನ್​ ಅಗರ್ವಾಲ್​ ಜೊತೆಗೆ ಫೆಬ್ರವರಿ 2026ರಲ್ಲಿ ನಿಶ್ಚಿತಾರ್ಥ ನಡೆದಿತ್ತು. ಇಬ್ಬರು ಸಾಕಷ್ಟು ಖುಷಿಯಿಂದ ಪಾಲ್ಗೊಂಡಿರುವ ಫೋಟೋಗಳು ಸೋಶಿಯಲ್​ ಮೀಡಿಯಾದಲ್ಲಿ ಇದೆ. ಇನ್ನು ಇಬ್ಬರಿಗೂ ನವೆಂಬರ್​ನಲ್ಲಿ ಮದುವೆ ಮಾಡಬೇಕು ಎಂದು ಕುಟುಂಬ ದಿನಾಂಕ ಫಿಕ್ಸ್ ಮಾಡಿತ್ತು. ಇದಕ್ಕಾಗಿ ರಾಜಸ್ಥಾನದಲ್ಲಿ 170 ಕೋಟಿಗೆ ಹಾಲ್​ ಬುಕ್​ ಮಾಡಲಾಗಿತ್ತು. ಅತಿಥಿಗಳಿಗಾಗಿ ಎರಡು ಜೆಟ್​​ ಅನ್ನು ಅಗರ್ವಾಲ್​ ಕುಟುಂಬ ಬುಕ್​ ಮಾಡಿತ್ತು.

ರಹಸ್ಯ ಮದುವೆ

ಆದರೆ, ಜೂನ್​ 18ರಂದು ಎಲ್ಲವೂ ಮುಗಿದಿತ್ತು. ಪುಣೆಯ ಇತಿಹಾಸ ಪ್ರಸಿದ್ಧ ಲೋಹಗಡ ಕೋಟೆಯಿಂದ ಕೇತನ್​ರನ್ನು ತಳ್ಳಿ ಕೊಲೆ ಮಾಡಲಾಗಿತ್ತು. ಈ ಘಟನೆ ಜರುಗುವ ಮುನ್ನ 4 ತಿಂಗಳ ಹಿಂದೆ ಸಿಯಾ ಹಾಗೂ ಚೇತನ್ ರಿಜಿಸ್ಟರ್​ ಆಫೀಸಿನಲ್ಲಿ​ ಮದುವೆಯಾಗಿದ್ದರು ಎನ್ನುವ ವಿಚಾರಗಳು ಮುನ್ನೆಲೆಗೆ ಬಂದಿವೆ.

ಇದು ಸತ್ಯವೋ ಅಥವಾ ಸುಳ್ಳೋ, ವಿಶೇಷ ವಿವಾಹ ಕಾಯ್ದೆಯಡಿ ಪ್ರಮಾಣ ಪತ್ರ ಇದೆಯೇ ಎನ್ನುವುದನ್ನು ಪತ್ತೆ ಹಚ್ಚಲು ಪುಣೆ ಗ್ರಾಮೀಣ ಪೊಲೀಸರು ನೋಂದಾಯಿತ ಕಚೇರಿಯಲ್ಲಿ ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಫ್ರೆಂಡ್ಸ್ ಸಾಕ್ಷಿ

ಇವರಿಬ್ಬರ ಮದುವೆಗೆ ಸಿಯಾಳ ಕಾಲೇಜು ಸ್ನೇಹಿತರೇ ಸಾಕ್ಷಿದಾರರಾಗಿ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಬ್ಬರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಇಷ್ಟೇ ಅಲ್ಲದೆ ಸಿಯಾ ಮತ್ತು ಚೇತನ್ ಹಾರ ಧರಿಸಿ ನಿಂತಿರುವ ಫೋಟೋಗಳನ್ನು ಪ್ರೈವೇಟ್​ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಆದರೆ, ಇದನ್ನು ಅಳಿಸಿಹಾಕಿರುವುದರಿಂದ ಫೋಟೋಗಳನ್ನು ಮರುಪಡೆಯಲು ಪೊಲೀಸರ ತಾಂತ್ರಿಕವಾಗಿ ಕೆಲಸ ಮಾಡಲಾಗುತ್ತಿದೆ ಎನ್ನಲಾಗಿದೆ.

ಪೊಲೀಸರ ಅನುಮಾನಕ್ಕೆ ಕಾರಣವೇನು?

ಸಿಯಾ ಮತ್ತು ಚೇತನ್​ರ ವಾಟ್ಸಾಪ್​ ಚಾಟ್​ಗಳನ್ನು ಗಮನಿಸಿದ ಪೊಲೀಸರಿಗೆ ಅದರಲ್ಲಿದ್ದ ವೆಡ್ಡಿಂಗ್​ ಚಾಟ್​ ಎಲ್ಲವನ್ನು ಹೇಳುವಂತೆ ಮಾಡಿದೆ. ಈ ಮೆಸೇಜುಗಳನ್ನು ಅಳಿಸಿ ಹಾಕಲಾಗಿತ್ತು. ಆದರೆ ತಂತ್ರಜ್ಞ ಟೀಂನ ಸಹಾಯದಿಂದ ರಿಟ್ರೀವ್​ ಮಾಡಿಸುವ ಮೂಲಕ ಪೊಲೀಸರು ಕಾರ್ಯಚಾರಣೆ ಮುಂದುವರೆಸಿದ್ದಾರೆ.

ಕೊಲೆ ಮಾಡಲು ಕಾರಣವಾಗಿದ್ದು ಇದೇ ಪಾಯಿಂಟ್

ಉದಯಪುರದಲ್ಲಿ ಮದುವೆ ನಡೆಸುವುದು ಖಾತರಿಯಾದ ಕಾರಣ ಕೇತನ್​ ಕುಟುಂಬವು ಸಿಯಾಳ ದಾಖಲೆಗಳನ್ನು ಕೇಳಿದ್ದರು. ಇದರಿಂದ ಭಯಗೊಂಡ ಆಕೆ ತನ್ನ ಮದುವೆ ರಹಸ್ಯ ಎಲ್ಲಿ ಬಯಲಾಗುತ್ತದೆಯೋ ಎನ್ನುವ ಭಯದಲ್ಲಿ ಕೇತನ್​​ರನ್ನು ಕೊಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ರಹಸ್ಯ ಮದುವೆಯ ಗುಟ್ಟು ರಟ್ಟಾಗುವ ಭಯದಲ್ಲಿ ಚೇತನ್​​​ ಮಧ್ಯವರ್ತಿಯೊಬನ್ನಿಗೆ ಯಾವುದೇ ವಿಚಾರ ಹೊರಬೀಳದಂತೆ ನೋಡಿಕೊಳ್ಳಲು ಹಣ ಕೊಟ್ಟಿದ್ದ ಎನ್ನುವ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಚೇತನ್​ ಚೌಧರಿಯ ಬ್ಯಾಂಕ್​ ಖಾತೆಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಸಿಯಾ ಪೊಲೀಸರ ಮುಂದೆ ಹೇಳಿದ್ದೇನು, ಘಟನೆ ಬಗ್ಗೆ ವಿವರ

'ತಾನು ಮದುವೆಗೆ ಸಿದ್ಧಳಿರಲಿಲ್ಲ. ಮದುವೆ ಬೇಡ ಎಂದರೂ ಕೇತನ್​ ಕೇಳಲಿಲ್ಲ. ಪೋಷಕರ ಗೌರವಕ್ಕೆ ಧಕ್ಕೆ ಉಂಟಾಗಬಾರದು ಎಂದು ಚೇತನ್​ ಜೊತೆಗೆ ಓಡಿ ಹೋಗಿಲ್ಲ' ಎಂದು ಸಿಯಾ ಹೇಳಿಕೊಂಡಿದ್ದಾಳೆ. ಇದೆಲ್ಲ ಕಾರಣವನ್ನು ಇಟ್ಟುಕೊಂಡು ಜೂನ್ 18 ರಂದು ಪುಣೆಯ ಇತಿಹಾಸ ಪ್ರಸಿದ್ಧ ಲೋಹಗಡ ಕೋಟೆಯಿಂದ ಕೇತನ್​ರನ್ನು ತಳ್ಳಿ ಕೊಲೆ ಮಾಡಲಾಗಿತ್ತು. ಆದರೆ, ಸೆಲ್ಫಿ ತೆಗೆದುಕೊಳ್ಳುವಾಗ ತೀವ್ರ ಗಾಳಿಯಿಂದಾಗಿ ಕೇತನ್​​​​ ಕೆಳಕ್ಕೆ ಬಿದ್ದ ಎಂದು ಸುಳ್ಳು ಹೇಳಿ ಕುಟುಂಬಸ್ಥರನ್ನು ನಂಬಿಸಿದ್ದಳು ಸಿಯಾ.

ಯಾವುದೇ ಭಾವನೆ ಮುಖದಲ್ಲಿರಲಿಲ್ಲ

ಭಾವಿ ಪತಿಯ ಮೃತದೇಹ ಮನೆಗೆ ಬಂದಾಗ ನಿರ್ಭಾವುಕಳಾಗಿ ಇರವುದನ್ನು ಕೇತನ್​ ಕುಟುಂಬ ಗಮನಿಸಿದೆ. ನಂತರ ಆಕೆ ಅವರಿಗೆ ಸಾಂತ್ವನ ಹೇಳಲಿ ಅವರ ನಿವಾಸಕ್ಕೆ ಹೋದಾಗ ಆಕೆಯಲ್ಲಿದ್ದ ಬದಲಾವಣೆ, ಘಟನೆ ಬಗ್ಗೆ ಬದಲಿಸುತ್ತಿದ್ದ ವರಸೆ ಏನೋ ಸರಿಯಾಗಿಲ್ಲ ಎನ್ನುವ ಸಂಶಯವನ್ನು ಮೂಡಿಸಿತ್ತು. ಹೀಗಾಗಿ ಮತ್ತೆ ಮರು ತನಿಖೆಗೆ ಪೊಲೀಸರಿಗೆ ಮನವಿ ಮಾಡಿಕೊಂಡರು ಕುಟುಂಬಸ್ಥರ ದೂರಿನ ಮೇರೆಗೆ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ತಾಂತ್ರಿಕ ಭಾಗವಾಗಿ ನಡೆಸಿದ ತನಿಖೆಯಿಂದ ಆರೋಪಿಗಳ ನಿಜ ಬಣ್ಣ ಬಯಲಾಯಿತು.

ಜಾಕೆಟ್ ಧರಿಸಿದ್ದ ಸಿಯಾ ಹುಡುಗ

ಉರಿ ಬಿಸಿಲಿನಲ್ಲೂ ಜಾಕೆಟ್​ ಧರಿಸುವ ಅಗತ್ಯವೇನಿತ್ತು ಎನ್ನುವ ಆಧಾರದ ಮೇಲೆ ಚೇತನ್​​ನನ್ನು ವಿಚಾರಣೆಗೆ ಪಡೆದುಕೊಳ್ಳಲಾಗಿತ್ತು. ಇನ್ನು ಆತನೊಂದಿಗೆ 2ಸಾವಿರಕ್ಕೂ ಹೆಚ್ಚು ಗಂಟೆ, 200ಕ್ಕೂ ಹೆಚ್ಚು ಬಾರಿ ಸಿಯಾ ಮಾತನಾಡಿದ್ದಳು. ಇವು ಆರೋಪಿಗಳ ಸುಳಿವನ್ನು ಕೊಟ್ಟಿತ್ತು. ಸದ್ಯ ಸಿಯಾ ಹಾಗೂ ಚೇತನ್​ ಚೌಧರಿ ಪೊಲೀಸ್ ಕಸ್ಟಡಿಯಲ್ಲಿದ್ದಾರೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net