'ಸಿಯಾ ಬೆರಳಿಗೆ ಗಾಯವಾಗಿತ್ತು, ಆಕೆ ಅಶ್ಲೀಲ ಸನ್ನೆ ಮಾಡಿಲ್ಲ';ಮಗಳ ಬಗ್ಗೆ ಪ್ರವೀಣ್​ ಗೋಯಲ್​ ಸಮರ್ಥಿಸಿಕೊಂಡಿದ್ದು ಹೀಗೆ.. Ketan Murder

Siya Goyal Father Clarification on Middle finger gesture
Siya Goyal Father Clarification on Middle finger gesture
Published on

ಪ್ರಮುಖ ಮುಖ್ಯಾಂಶಗಳು

  • ಸಿಯಾ ಗೋಯೆಲ್​ ಕೈಗೆ ಕಾರಿನ ಬಾಗಿಲು ಬಡಿದು ಗಾಯವಾಗಿತ್ತು, ಅಶ್ಲೀಲ ಸನ್ನೆ ಮಾಡಿಲ್ಲ
  • ಸಿಯಾ ವಿರುದ್ಧ ಕೇಳಿ ಬಂದಿದ್ದ ಅಶ್ಲೀಲ ಸನ್ನೆ ವಿವಾದಕ್ಕೆ ಕ್ಲಾರಿಟಿ ಕೊಟ್ಟ ತಂದೆ ಪ್ರವೀಣ್​ ಗೋಯಲ್​
  • ತಪ್ಪು ಮಾಹಿತಿ ಕೊಡಬೇಡಿ ಎಂದು ಮಾಧ್ಯಮದ ಮುಂದೆ ಮನವಿ ಮಾಡಿಕೊಂಡ ಪ್ರವೀಣ್​ ಗೋಯಲ್​
ಪುಣೆ: 'ಮಗಳ ಕೈಗೆ ಗಾಯವಾಗಿತ್ತು. ಆಕೆ ಅಶ್ಲೀಲ ಕೈ ಸನ್ನೆ ಮಾಡಿಲ್ಲ. ಇದು ಉದ್ದೇಶ ಪೂರ್ವಕವಲ್ಲ. ತಪ್ಪಾಗಿ ಮಾಹಿತಿ ಕೊಡ್ಬೇಡಿ' ಹೀಗೆಂದು ಮಗಳು ಸಿಯಾ ಗೋಯಲ್​ ವಿರುದ್ಧ ಹರಿದಾಡುತ್ತಿದ್ದ ಅಶ್ಲೀಲ ಸನ್ನೆ ವಿವಾದಕ್ಕೆ ಪೂರ್ಣ ವಿರಾಮವಿಟ್ಟಿದ್ದು, ಸಮರ್ಥಿಸಿಕೊಂಡಿದ್ದು ಆಕೆಯ ತಂದೆ ಪ್ರವೀಣ್​ ಗೋಯಲ್​​
ಹೌದು, ಯುವ ಉದ್ಯಮಿ ಕೇತನ್​ ಅಗರ್ವಾಲ್​​ರನ್ನು ಕೊಂದಿರುವ ಆರೋಪದ ಮೇಲೆ ವಿಚಾರಣೆಗೆ ಒಳಪಟ್ಟಿರುವ ಆರೋಪಿ ಸಿಯಾ ಕ್ಯಾಮೆರಾ ಮುಂದೆ ಅಶ್ಲೀಲ ಸನ್ನೆ (ಮಧ್ಯದ ಬೆರಳು ತೋರಿಸಿ) ಮಾಡಿದ್ದರು ಎಂದು ಆರೋಪಿಸಿ ವಿಡಿಯೋಗಳು ಹರಿದಾಡಿದ್ದವು. ಈ ಬಗ್ಗೆ ಅವರ ತಂದೆ ಪ್ರವೀಣ್​ ಗೋಯಲ್ ಮಾತನಾಡಿದ್ದಾರೆ.
ಅಶ್ಲೀಲ ಸನ್ನೆ ಮಾಡಿದ್ರ ಸಿಯಾ?
ಗುರುವಾರ ಪುಣೆ ಗ್ರಾಮೀಣ ಪೊಲೀಸರು, ಸಾಕ್ಷಿಗಳನ್ನು ಸಂಗ್ರಹ ಮಾಡುವ ಸಲುವಾಗಿ ಮಾರ್ಕೆಟ್​ ಯಾರ್ಡ್​ನಲ್ಲಿರುವ ಸಿಯಾ ಗೋಯಲ್​​​ ನಿವಾಸಕ್ಕೆ ಕರೆತಂದಿದ್ದರು. ಮನೆಯಿಂದ ಅವರನ್ನು ಮನೆಯಿಂದ ಹೊರಗೆ ಕರೆತಂದು ಪೊಲೀಸರ ಜೀಪನ್ನು ಹತ್ತಿಕೊಳ್ಳುವಾಗ ಅವರು ಮಧ್ಯದ ಬೆರಳನ್ನು ಕ್ಯಾಮೆರಾ ಮುಂದೆ ತೋರಿಸಿದ್ದಾರೆ ಎಂದು ವಿಡಿಯೋಗಳು ಹರಿದಾಡಿದ್ದವು. ಆಕೆಯ ಅತಿರೇಕದ ನಡೆ ವಿರುದ್ಧ ಹಲವರು ಕಿಡಿಕಾರಿದ್ದರು.

ಪ್ರವೀಣ್​ ಗೋಯಲ್​ ಏನಂದ್ರು

ಸೋಶಿಯಲ್​ ಮೀಡಿಯಾದಲ್ಲಿ ಸಿಯಾ ಗೋಯಲ್​ ಅಶ್ಲೀಲ ಸನ್ನೆ ಮಾಡಿದ ವಿರುದ್ಧ ಹಲವರು ಆಕ್ರೋಶ ವ್ಯಕ್ತಪಡಿಸುತ್ತಲೇ ಪ್ರವೀಣ್​ ಗೋಯಲ್​ ಮಾತನಾಡಿ, ಸಿಯಾ ಅಶ್ಲೀಲ ಸನ್ನೆ ಮಾಡಿಲ್ಲ. ಆಕೆ ಪೊಲೀಸ್​ ವಾಹನ ಹತ್ತುವಾಗ ಕಾರಿನ ಬಾಗಿಲು ಆಕೆಯ ಬೆರಳಿಗೆ ಬಡಿದು ಗಾಯವಾಗಿತ್ತು, ರಕ್ತ ಹೆಪ್ಪುಗಟ್ಟಿ ಹಸಿರು ಬಣ್ಣಕ್ಕೆ ತಿರುಗಿತ್ತು. ಸಿಯಾ ಬೆರಳಿಗೆ ಬ್ಯಾಂಡೇಜ್​ ಹಾಕಲಾಗಿತ್ತು. ಒಂದು ಬೆಳು ಊದಿಕೊಂಡಿದೆ. ಆಕೆ ಉದ್ದೇಶಪೂರ್ವಕವಾಗಿ ಹಾಗೆ ನಡೆದುಕೊಂಡಿಲ್ಲ. ಆದರೆ,ಇದನ್ನೇ ತಪ್ಪಾಗಿ ಪ್ರಚಾರ ಮಾಡುತ್ತಿರುವುದು ದುರದೃಷ್ಟಕರ ಎಂದು ಅವರು ಹೇಳಿದರು.

ಏನಿದು ಘಟನೆ?

ಜೂ.18ರಂದು ಯುವ ಉದ್ಯಮಿ ಕೇತನ್​ ಅಗರ್ವಾಲ್​ರನ್ನು ಲೋಹಗಡ ಕೋಟೆಯಿಂದ ಭಾವಿ ಪತ್ನಿ ಸಿಯಾ ಗೋಯಲ್ ಹಾಗೂ ಆಕೆಯ ಪ್ರಿಯಕರ ಚೇತನ್​ ಚೌಧರಿ ತಳ್ಳಿ ಕೊಲೆ ಮಾಡಿದ್ದರು. ನಂತರ, ಸೆಲ್ಫಿ ತೆಗೆದುಕೊಳ್ಳುವಾಗ ಮೇಲಿನಿಂದ ಬಿದ್ದು ಮೃತಪಟ್ಟಿದ್ದಾರೆ ಎಂದು ಕೇತನ್​ ಕುಟುಂಬಸ್ಥರನ್ನು ನಂಬಿಸಿದ್ದಳು. ಭಾವಿ ಪತಿ ಮೃತದೇಹ ಮನೆಗೆ ಬಂದಾಗ ಆಕೆಯ ಮುಖದಲ್ಲಿ ಕಾಣದ ದುಃಖ, ಪ್ರಕರಣದ ಬಗ್ಗೆ ಆಕೆ ಹೇಳುತ್ತಿದ್ದ ವಿಚಾರದಲ್ಲಿ ಸಂದೇಹ ಕಾಣಿಸಿಕೊಂಡ ಹಿನ್ನೆಲೆ ಪೊಲೀಸರಿಗೆ ಮರು ತನಿಖೆಗೆ ಕುಟುಂಬ ಮನವಿ ಮಾಡಿಕೊಂಡಿತ್ತು.
ಕೇತನ್​ ಕುಟುಂಬಸ್ಥರ ದೂರಿನ ಮೇರೆಗೆ, ಕೋಟೆ ಸುತ್ತಮುತ್ತಲಿನ ಪ್ರದೇಶದ ಸಿಸಿಟಿವಿ, ಕಾಲ್​ ಡಿಟೇಲ್ಸ್, ಕೋಟೆ ಭಾಗದಲ್ಲಿ ಅನುಮಾನಸ್ಪದ ಓಡಾಟದ ಬಗ್ಗೆ ತೀವ್ರ ತನಿಖೆ ನಡೆಸಿದ ಪೊಲೀಸರು ಸಿಯಾರನ್ನು ಬಂಧಿಸಿದರು. ಅತಿಯಾದ ಶಾಖದ ನಡುವೆಯೂ ಜಾಕೆಟ್​ ಹಾಕಿದ್ದ ಯುವಕನನ್ನು ಹುಡುಕಿ ಹೊರಟಾಗ ಆತ ಸಿಯಾಳ ಪ್ರಿಯಕರ ಎನ್ನುವುದು ತಿಳಿದುಬಂದಿದೆ. ಸದ್ಯ ಈ ಕೇಸ್​ ದಿನದಿಂದ ದಿನಕ್ಕೆ ನಾನಾ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಪೊಲೀಸರ ವಿಚಾರಣೆ ಮುಂದುವರೆದಿದೆ, (ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net