ಬ್ರಹ್ಮಪುತ್ರ ನದಿಯಲ್ಲಿ ದೋಣಿ ಮುಳುಗಿ ಮಕ್ಕಳು ಸೇರಿದಂತೆ ಆರು ಮಂದಿ ನಾಪತ್ತೆ; ರಕ್ಷಣಾ ಕಾರ್ಯಾಚರಣೆ | Brahmaputra river

ಬ್ರಹ್ಮಪುತ್ರ ನದಿಯಲ್ಲಿ ರಕ್ಷಣಾ ಕಾರ್ಯಾಚರಣೆ
ಬ್ರಹ್ಮಪುತ್ರ ನದಿಯಲ್ಲಿ ರಕ್ಷಣಾ ಕಾರ್ಯಾಚರಣೆ
Published on
ಗುವಾಹಟಿ: ಅಸ್ಸಾಂನ ಬ್ರಹ್ಮಪುತ್ರ ನದಿಯಲ್ಲಿ ಇಂದು(ಜ. 27) ಮೋಟಾರ್ ಚಾಲಿತ ದೋಣಿಯೊಂದು ಮುಳುಗಿದ ಪರಿಣಾಮ ಮಕ್ಕಳು ಸೇರಿದಂತೆ ಆರು ಮಂದಿ ನಾಪತ್ತೆಯಾಗಿದ್ದಾರೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ವರದಿಯಾಗಿದೆ.
ದೋಣಿಯು ರೋಹಂಪುರದಿಂದ ಅಸ್ಸಾಂನ ಬಾರ್ಪೇಟಾ ಜಿಲ್ಲೆಯ ಬೋರ್ಗುಲ್‌ಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕುಟುಂಬವೊಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳುವಾಗ ದೋಣಿ ಮುಳುಗಿದೆ. ಈ ವೇಳೆ ದೋಣಿಯಲ್ಲಿ 36 ಜನರಿದ್ದರು ಎನ್ನಲಾಗಿದೆ. ಈ ಪೈಕಿ ಮೂರರಿಂದ ನಾಲ್ಕು ಮಕ್ಕಳು ಸೇರಿ ಆರು ಮಂದಿ ನಾಪತ್ತೆಯಾಗಿದ್ದಾರೆ. 
ಈಜು ಬರುವವರು ಈಜಿಕೊಂಡು ದಡಕ್ಕೆ ಬಂದರೆ, ಕೆಲವರನ್ನು ಮೀನುಗಾರರು ಮತ್ತು ಸ್ಥಳೀಯರು ರಕ್ಷಣೆ ಮಾಡಿದ್ದಾರೆ. ದೋಣಿಯಲ್ಲಿ ಸಾಕಷ್ಟು ಲೈಫ್ ಜಾಕೆಟ್‌ಗಳು ಇರಲಿಲ್ಲ ಎನ್ನಲಾಗಿದೆ. 
ಇನ್ನೂ ಕಾಣೆಯಾದವರನ್ನು ರಕ್ಷಿಸಲು ಬಾರ್ಪೇಟಾ ಪೊಲೀಸರು, ಮೀನುಗಾರರು ಮತ್ತು ಎಸ್​ಡಿಆರ್​ಎಫ್ ತಂಡದೊಂದಿಗೆ ಶೋಧ ಕಾರ್ಯಾಚರಣೆ ನಡೆಸಿದೆ. ಕತ್ತಲಾದ ಕಾರಣ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ್ದು, ನಾಳೆ ಬೆಳಗ್ಗೆ ಮತ್ತೆ ಶೋಧ ಪುನರಾರಂಭಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ (ಏಜೆನ್ಸೀಸ್). 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net