ಈ ಅಕ್ರಮ ಸಂಬಂಧ ಕುಟುಂಬಕ್ಕೆ ದೊಡ್ಡ ಅವಮಾನ ಎಂದು ಭಾವಿಸಿದ ಮುತ್ತುರಾಜ, ತನ್ನ ಸಹೋದರಿಯನ್ನು ಕೊಲ್ಲಲು ನಿರ್ಧರಿಸಿದನು. ಕೊಲೆ ನಡೆದ ರಾತ್ರಿ, ಮುತ್ತುರಾಜ ತನ್ನ ಸ್ನೇಹಿತ ವಸಂತ್ ಜೊತೆ ಬೈಕ್‌ನಲ್ಲಿ ಸುಮಿತ್ರಾಳ ಮನೆಗೆ ಬಂದನು. ಯೋಜನೆಯಂತೆ ವಸಂತ್ ಮನೆಯ ಹೊರಗೆ ಕಾವಲು ಕಾಯುತ್ತಿದ್ದರೆ, ಮುತ್ತುರಾಜ ಒಳಗೆ ಹೋಗಿ ಸುಮಿತ್ರಾಳ ಜೊತೆ ಮತ್ತೊಮ್ಮೆ ಜಗಳವಾಡಿದನು. ಜಗಳ ತೀವ್ರಗೊಳ್ಳುತ್ತಿದ್ದಂತೆ, ಕೋಪಗೊಂಡ ಮುತ್ತುರಾಜ ತಾನು ಅಡಗಿಸಿ ತಂದಿದ್ದ ಕುಡುಗೋಲಿನಿಂದ ಸಹೋದರಿಯ ಮೇಲೆ ನಿರ್ದಯವಾಗಿ ಹಲ್ಲೆ ನಡೆಸಿದ್ದಾನೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ಸುಮಿತ್ರಾ ಸ್ಥಳದಲ್ಲೇ ಸಾವನ್ನಪ್ಪಿದರು. ಕೊಲೆಯ ನಂತರ ಮುತ್ತುರಾಜ ಮತ್ತು ವಸಂತ್ ಸ್ಥಳದಿಂದ ಪರಾರಿಯಾಗಿದ್ದರು.